ಮಗುವೇ ಅದೃಷ್ಟ ಎಂದು ನಂಬಿರುವ ರಾಮ್ ಚರಣ್

ಶುಕ್ರವಾರ, 17 ಮಾರ್ಚ್ 2023 (09:10 IST)
Photo Courtesy: Twitter
ಹೈದರಾಬಾದ್: ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ತೇಜ್ ತಮ್ಮ ಮಗುವೇ ತಮಗೆ ಅದೃಷ್ಟ ಎಂದು ನಂಬಿಕೊಂಡಿದ್ದಾರೆ.

ರಾಮ್ ಚರಣ್ ತೇಜ್ ಪತ್ನಿ ಉಪಾಸನಾ ಈಗ ಗರ್ಭಿಣಿ. ಮದುವೆಯಾಗಿ ಕೆಲವು ವರ್ಷಗಳ ನಂತರ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಆರ್ ಆರ್ ಆರ್ ಸಿನಿಮಾದ ಹಾಡಿಗೆ ಆಸ್ಕರ್ ಪ್ರಶಸ್ತಿ ಕೂಡಾ ಸಿಕ್ಕಿದೆ.

ಇದಕ್ಕೆ ರಾಮ್ ಚರಣ್ ತುಂಬಾ ಖುಷಿಯಾಗಿದ್ದಾರೆ. ತಮ್ಮ ಮಗುವೇ ತಮಗೆ ಅದೃಷ್ಟ ತರುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಆಸ್ಕರ್ ರೆಡ್ ಕಾರ್ಪೆಟ್ ನಲ್ಲೂ ಸಂದರ್ಶಕರ ಮುಂದೆ ರಾಮ್ ಚರಣ್ ಇದನ್ನೇ ಹೇಳಿದ್ದರು. ಆಸ್ಕರ್ ಗೆದ್ದ ಬಳಿಕವೂ ನಮಗೆ ಹುಟ್ಟಲಿರುವ ಮಗು ನಮ್ಮ ಅದೃಷ್ಟ ಎಂದು ಹೇಳಿದ್ದಾರೆ. ಒಟ್ಟಾರೆ ಮಗು ಆಗಮನಕ್ಕೆ ಮುನ್ನವೇ ಈ ಮಗು ರಾಮ್ ಚರಣ್ ದಂಪತಿಗೆ ಖುಷಿ ತರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ