ಮಿರ್ಚಿ ಟೀಂ ಜೊತೆ ಮತ್ತೊಂದು ಸಿನಿಮಾ ಘೋಷಣೆ ಮಾಡಲಿದ್ದಾರಾ ಪ್ರಭಾಸ್?

ಭಾನುವಾರ, 10 ಜುಲೈ 2022 (08:50 IST)
ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ಈ ಹಿಂದೆ ಮಿರ್ಚಿ ಎನ್ನುವ ಸೂಪರ್ ಹಿಟ್ ಸಿನಿಮಾವನ್ನು ಕೊಟ್ಟಿದ್ದರು.

ಇದೀಗ ಅದೇ ನಿರ್ದೇಶಕರ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರಂತೆ. ಮಿರ್ಚಿ ನಿರ್ದೇಶಕ ಕೊರಟಾಲ ಶಿವನ್ ಜೊತೆ ಪ್ರಭಾಸ್ ಹೊಸ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆದಿದೆಯಂತೆ.

ಬಾಹುಬಲಿ ಬಳಿಕ ಪ್ರಭಾಸ್ ನಟಿಸಿದ್ದ ಸಾಹೋ, ರಾಧೇ ಶ್ಯಾಮ್ ಎರಡೂ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿತ್ತು. ಇದೀಗ ಆದಿಪುರುಷ್, ಸಲಾರ್ ಬಗ್ಗೆ ಪ್ರಭಾಸ್ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಇದರ ಜೊತೆಗೆ ಕೊರಟಾಲ ಶಿವನ್ ಜೊತೆ ಹೊಸ ಸಿನಿಮಾಗೆ ಸಹಿ ಹಾಕಲಿದ್ದಾರೆ ಎಂಬ ಸುದ್ದಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ