ವಿಕ್ರಮ್ ಆರೋಗ್ಯದ ಬಗ್ಗೆ ಪುತ್ರನ ಮಾಹಿತಿ
ತಂದೆಯ ಆರೋಗ್ಯದ ಬಗ್ಗೆ ಪುತ್ರ ಧ್ರುವ ವಿಕ್ರಮ್ ಸ್ಪಷ್ಟನೆ ನೀಡಿದ್ದಾರೆ. ವಿಕ್ರಮ್ ಗೆ ಹೃದಯಾಘಾತವಾಗಿದೆ ಎಂಬ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ.
ತಂದೆಗೆ ಹೃದಯಾಘಾತವಾಗಿದೆ ಎಂಬ ವರದಿಗಳೆಲ್ಲಾ ಸುಳ್ಳು. ಹೃದಯ ಬಿಗಿತದಿಂದಾಗಿ ಉಸಿರು ಕಟ್ಟಿದಂತಾಗಿತ್ತು. ಹೀಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯಕ್ಕೆ ಅವರು ಆರೋಗ್ಯವಾಗಿದ್ದಾರೆ. ಸದ್ಯದಲ್ಲೇ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಧ್ರುವ ವಿಕ್ರಮ್ ಹೇಳಿದ್ದಾರೆ.