ಪ್ರಸ್‌ಕ್ಲಬ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ರಾಜಕೀಯ ಪ್ರವೇಶಿಸುವ ಆಕಾಂಕ್ಷೆ ಹೊಂದಿಲ್ಲ. ಆದರೆ ತುಂಬಾ ಒತ್ತಾಯ ಮಾಡಿದ್ರೆ ಬರಬಾರದೆಂದೇನು ಇಲ್ಲ, ಬರ್ತೀನಿ ಎಂದು ತಿಳಿಸಿದ್ದಾರೆ.
ಕಲಾವಿದನಾಗಿ ಸ್ಪಂದಿಸಲೇಬೇಕು, ಹೇಡಿಯಾಗಿ ಬಿಂಬಿಸಿಕೊಳ್ಳಬಾರದು, ಗೊತ್ತಿದ್ದು ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ಕಿಡಿ ಕಾರಿದ್ದಾರೆ.