ಸಾಲ ಮಾಡಿಯಾದರೂ ಜನರಿಗೆ ಸಹಾಯ ಮಾಡುವೆ ಎಂದ ನಟ ಪ್ರಕಾಶ್ ರೈ

ಮಂಗಳವಾರ, 21 ಏಪ್ರಿಲ್ 2020 (09:43 IST)
ಬೆಂಗಳೂರು: ಸಾಲ ಮಾಡಿಯಾದರೂ ಸರಿಯೇ, ಕೊರೋನಾದಿಂದ ಸಂಕಷ್ಟಕ್ಕೀಡಾದ ಜನರಿಗೆ ಸಹಾಯ ಮಾಡುವುದಾಗಿ ನಟ ಪ್ರಕಾಶ್ ರೈ ಹೇಳಿದ್ದಾರೆ.


ತಮ್ಮ ಬಳಿ ಕೆಲಸ ಮಾಡುವ ಎಲ್ಲಾ ನೌಕರರಿಗೂ ಮೇವರೆಗಿನ ವೇತನ ನೀಡಿ ಸುದ್ದಿಯಾಗಿದ್ದ ಪ್ರಕಾಶ್ ರೈ ಇದೀಗ ಸಂಕಷ್ಟಕ್ಕೀಡಾದ ಜನರ ಸಹಾಯಕ್ಕೆ ತಮ್ಮ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪ್ರಕಾಶ್ ರೈ, ‘ನನ್ನ ಹಣಕಾಸಿನ ಮೂಲ ಕ್ಷೀಣಿಸುತ್ತಿದೆ. ಹಾಗಿದ್ದರೂ ಜನರಿಗೆ ಸಹಾಯ ಮಾಡಲು ಸಾಲ ಮಾಡುವೆ. ನನಗೆ ಗೊತ್ತು, ನಾನು ಮತ್ತೆ ಹಣ ಸಂಪಾದಿಸುವೆ. ಈ
ಸಂದರ್ಭದಲ್ಲಿ ಮಾನವೀಯತೆ ಮುಖ್ಯ. ನಾವು ಜತೆಯಾಗಿ ಹೋರಾಡೋಣ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ