ಮೇಘನಾ ರಾಜ್ ತಾಯಿ, ನಟಿ ಪ್ರಮೀಳಾ ಜೋಷಾಯ್ ಆಸ್ಪತ್ರೆಗೆ ದಾಖಲು
ಮಂಗಳವಾರ, 8 ಡಿಸೆಂಬರ್ 2020 (09:24 IST)
ಬೆಂಗಳೂರು: ಮೇಘನಾ ರಾಜ್ ತಾಯಿ, ಹಿರಿಯ ನಟಿ ಪ್ರಮೀಳಾ ಜೋಷಾಯ್ ಕೊರೋನಾ ಕಾರಣದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Photo: Google curtosy
ಕೊರೋನಾದಿಂದ ಬಳಲುತ್ತಿರುವ ಪ್ರಮೀಳಾ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಮೇಘನಾ ಹಾಗೂ ಅವರ ನವಜಾತ ಪುತ್ರನೂ ಅವರ ಮನೆಯಲ್ಲೇ ಇದ್ದಾರೆ. ಆದರೂ ಅವರಿಗೆ ಯಾವುದೇ ಅಪಾಯವಾಗಿಲ್ಲ ಎನ್ನಲಾಗಿದೆ.