ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಶಾಂತ್ ನೀಲ್: ತೆಲುಗಿನಲ್ಲಿ ಬ್ಯುಸಿಯಾದ ಸ್ಟಾರ್ ಡೈರೆಕ್ಟರ್

ಭಾನುವಾರ, 4 ಜೂನ್ 2023 (09:10 IST)
Photo Courtesy: Twitter
ಬೆಂಗಳೂರು: ಕೆಜಿಎಫ್, ಉಗ್ರಂನಂತಹ ಆಕ್ಷನ್ ಪ್ಯಾಕ್ಡ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಪ್ರಶಾಂತ್ ನೀಲ್ ಗೆ ಇಂದು ಜನ್ಮದಿನದ ಸಂಭ್ರಮ.

ಅವರ ಜನ್ಮದಿನಕ್ಕೆ ಹೊಂಬಾಳೆ ಫಿಲಂಸ್ ಸೇರಿದಂತೆ ಅಭಿಮಾನಿಗಳು, ಸ್ನೇಹಿತರು ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರುತ್ತಿದ್ದಾರೆ. ಮೂಲತಃ ಕನ್ನಡಿಗರಾದರೂ ಪ್ರಶಾಂತ್ ನೀಲ್ ಈಗ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.

ಕೆಜಿಎಫ್ 2 ಸಿನಿಮಾ ಬಳಿಕ ಅವರು ತೆಲುಗಿನಲ್ಲಿ ಸಲಾರ್, ಜ್ಯೂ.ಎನ್ ಟಿಆರ್ ಜೊತೆಗೆ ಇನ್ನೊಂದು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ ಅವರು ಕನ್ನಡದಲ್ಲಿ ಯಾವುದೇ ಸಿನಿಮಾ ನಿರ್ದೇಶಿಸುತ್ತಿಲ್ಲ. ಬಹುಶಃ ಮುಂದೆ ಅವರು ಕನ್ನಡದಲ್ಲಿ ನಿರ್ದೇಶಿಸಬಹುದಾದ ಸಿನಿಮಾ ಎಂದರೆ ಕೆಜಿಎಫ್ 3. ಏನೇ ಆದರೂ ಕನ್ನಡ ಸಿನಿಮಾವನ್ನು ಪರಭಾಷೆಯವರೂ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕನಿಗೆ ಜನ್ಮದಿನದ ಶುಭಾಶಯಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ