ಅಂಬಿ ಮನೆಯಲ್ಲಿ ಶುರುವಾಯ್ತು ಅಭಿಷೇಕ್ ಮದುವೆ ಸಂಭ್ರಮ

ಶುಕ್ರವಾರ, 2 ಜೂನ್ 2023 (16:12 IST)
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್-ಸುಮಲತಾ ದಂಪತಿ ಪುತ್ರ ಅಭಿಷೇಕ್ ಅಂಬರೀಶ್ ಜೂನ್ 5 ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಈಗಾಗಲೇ ಸುಮಲತಾ ಅಂಬರೀಶ್ ಮಗನ ಮದುವೆಗಾಗಿ ಗಣ್ಯಾತಿಗಣ್ಯರನ್ನು ಆಹ್ವಾನಿಸಿದ್ದಾರೆ. ಬೆಂಗಳೂರಿನಲ್ಲಿ ಮದುವೆ-ಆರತಕ್ಷತೆ ಜೊತೆಗೆ ಮಂಡ್ಯದಲ್ಲಿ ಮತ್ತೊಮ್ಮೆ ಆರತಕ್ಷತೆ ನಡೆಯಲಿದೆ. ಇದಕ್ಕೆ ಪ್ರಧಾನಿ ಮೋದಿಗೂ ಆಹ್ವಾನ ನೀಡಲಾಗಿದೆ.

ಫ್ಯಾಶನ್ ಡಿಸೈನರ್ ಅವಿವಾ ಬಿಡಪ್ಪಾರನ್ನು ಅಭಿ ಮದುವೆಯಾಗುತ್ತಿದ್ದಾರೆ. ಇದಕ್ಕಾಗಿ ಅಂಬಿ ಮನೆಯಲ್ಲಿ ಇಂದಿನಿಂದಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿದೆ. ಮದುವೆಗಾಗಿ ಅಂಬಿ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅರಶಿನ ಶಾಸ್ತ್ರದಿಂದ ವಿವಾಹ ಕಾರ್ಯಕ್ರಮಗಳು ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಅಂಬಿ ಕುಟುಂಬಸ್ಥರು ಭಾಗಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ