ಶಾರುಖ್ ‘ಡಂಕಿ’ ಸಿನಿಮಾಗೆ ಈಗ ಸಲಾರ್ ಭಯ ಶುರು!
ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಮತ್ತು ಶಾರುಖ್ ಖಾನ್ ನಾಯಕರಾಗಿರುವ ಡಂಕಿ ಸಿನಿಮಾ ಒಂದೇ ದಿನ ಅಂದರೆ ಡಿಸೆಂಬರ್ 22 ರಂದು ತೆರೆಗೆ ಬರುತ್ತಿದೆ.
ಎರಡು ಸತತ ಹಿಟ್ ಸಿನಿಮಾಗಳ ನಂತರ ಶಾರುಖ್ ಖಾನ್ ಡಂಕಿ ಸಿನಿಮಾ ಮೂಲಕ ತೆರೆಗೆ ಬರಲಿದ್ದಾರೆ. ಆದರೆ ಈ ಸಿನಿಮಾದ ಟ್ರೈಲರ್ ಪ್ರೇಕ್ಷಕರಿಗೆ ಅಷ್ಟೊಂದು ಇಷ್ಟವಾಗಿಲ್ಲ.
ಆದರೆ ಇತ್ತ ಸಲಾರ್ ಟ್ರೈಲರ್ ಬಿಡುಗಡೆಯಾಗಿ ದಾಖಲೆಯ ವೀಕ್ಷಣೆ ಪಡೆದಿದೆ. ಚಿತ್ರದ ಟ್ರೈಲರ್ ನೋಡಿ ಕೆಜಿಎಫ್ ಲೆವೆಲ್ ಗಿದೆ ಎಂದು ಪ್ರೇಕ್ಷಕರು ಈಗಾಗಲೇ ಅಭಿಪ್ರಾಯಪಟ್ಟಿದ್ದು, ಚಿತ್ರ ನೋಡಲು ಉತ್ಸಾಹ ವ್ಯಕ್ತಪಡಿಸಿದ್ದಾರೆ. ಇದು ಶಾರುಖ್ ಡಂಕಿ ತಂಡಕ್ಕೆ ಸವಾಲಾಗಿದೆ. ಮತ್ತೆ ಪ್ರಶಾಂತ್ ನೀಲ್ ಸಿನಿಮಾ ಮುಂದೆ ಮುಗ್ಗರಿಸುವ ಭಯ ಕಾಡಿದೆ.