ಪ್ರಶಾಂತ್ ನೀಲ್ ಅದೃಷ್ಟ ದಿನ ಸಲಾರ್ 1 ರಿಲೀಸ್?

ಮಂಗಳವಾರ, 26 ಸೆಪ್ಟಂಬರ್ 2023 (08:31 IST)
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ 1 ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿತ್ತು. ಆದರೆ ಹೊಸ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿರಲಿಲ್ಲ.

ಆದರೆ ಈಗ ಸಲಾರ್ 1 ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಪ್ರಶಾಂತ್ ನೀಲ್ ಡಿಸೆಂಬರ್ 22 ರಂದು ಸಲಾರ್ ಬಿಡುಗಡೆ ಮಾಡಲು ಉದ್ದೇಶಿಸಿದ್ದಾರಂತೆ.

ಡಿಸೆಂಬರ್ 22 ಪ್ರಶಾಂತ್ ನೀಲ್ ಪಾಲಿಗೆ ಅದೃಷ್ಟದ ದಿನ. ಇದಕ್ಕೆ ಮೊದಲು ಪ್ರಶಾಂತ್ ನೀಲ್, ಯಶ್ ಮತ್ತು ಇಡೀ ಕನ್ನಡ ಚಿತ್ರರಂಗಕ್ಕೆ ಹೊಸ ತಿರುವು ಕೊಟ್ಟ ಕೆಜಿಎಫ್ 1 ಸಿನಿಮಾ ರಿಲೀಸ್ ಆಗಿದ್ದು ಡಿಸೆಂಬರ್ 21 ರಂದು. ಹೀಗಾಗಿ ಇದೇ ದಿನಕ್ಕೆ ಸಲಾರ್ ಕೂಡಾ ರಿಲೀಸ್ ಮಾಡಲು ಪ್ರಶಾಂತ್ ನೀಲ್ ಲೆಕ್ಕಾಚಾರ ಹಾಕಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ