ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ವಿರುದ್ಧ ನಟಿ ಪ್ರಿಯಾಮಣಿ ಬೇಸರ

ಶನಿವಾರ, 31 ಆಗಸ್ಟ್ 2019 (09:33 IST)
ಬೆಂಗಳೂರು: ನನ್ನ ಪ್ರಕಾರ ಸಿನಿಮಾ ಕಳೆದ ವಾರ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿತ್ತು. ಆದರೆ ಪರಭಾಷೆಗಳ ಹಾವಳಿಯಿಂದಾಗಿ ಈ ಸಿನಿಮಾವನ್ನು ಮೂಲೆಗುಂಪು ಮಾಡುತ್ತಿರುವುದಕ್ಕೆ ಚಿತ್ರತಂಡ ಬೇಸರಗೊಂಡಿದೆ.


ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳಲ್ಲಿ ಕನ್ನಡ ಸಿನಿಮಾಗಳು ಆಗಾಗ ಎದುರಿಸುವ ಸಿನಿಮಾವೇ. ಈಗ ನನ್ನ ಪ್ರಕಾರ ಸಿನಿಮಾಗೂ ಅದೇ ಅನುಭವವಾಗುತ್ತಿದೆ.

ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದರೂ ಬೇರೆ ಭಾಷೆಯ ಸಿನಿಮಾಗಳಿಗಾಗಿ ನನ್ನ ಪ್ರಕಾರ ಶೋ ಕಡಿಮೆ ಮಾಡುತ್ತಿರುವುದಕ್ಕೆ ನಟಿ ಪ್ರಿಯಾಮಣಿ ವಿಡಿಯೋ ಸಂದೇಶ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲದೆ, ಕನ್ನಡ ಸಿನಿಮಾಗಳ ಶೋ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಬೇರೆ ಭಾಷೆ ಸಿನಿಮಾಗಳನ್ನು ಹಾಕಲೇಬಾರದು ಎಂದಲ್ಲ. ಆದರೆ ಕನ್ನಡ ಸಿನಿಮಾ ಶೋಗಳನ್ನು ಸಂಪೂರ್ಣವಾಗಿ ಕಿತ್ತು ಹಾಕುವ ಬದಲು ಕೆಲವು ಶೋಗಳನ್ನಾದರೂ ಇಡಿ. ಖಂಡಿತಾ ಕನ್ನಡ ಸಿನಿಮಾ ನೋಡಲು ಜನ ಬಂದೇ ಬರ್ತಾರೆ. ನಮಗೆ ಪ್ರೋತ್ಸಾಹ ಕೊಡಿ ಎಂದು ಪ್ರಿಯಾಮಣಿ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ