‘ಪುಟ್ಟ ಗೌರಿ’ ರಂಜಿನಿ ಸಿನಿಮಾಗೂ ಡಿ ಬಾಸ್ ದರ್ಶನ್ ಗೂ ಏನಿದು ಕನೆಕ್ಷನ್

ಶನಿವಾರ, 31 ಆಗಸ್ಟ್ 2019 (09:26 IST)
ಬೆಂಗಳೂರು: ಪುಟ್ಟಗೌರಿ ಧಾರವಾಹಿ ಖ್ಯಾತಿಯ ರಂಜಿನಿ ರಾಘವನ್ ಮತ್ತು ಮನೋಜ್ ಅಭಿನಯದ ಟಕ್ಕರ್ ಸಿನಿಮಾದ ಅಡಿಯೋ ರಿಲೀಸ್ ಮತ್ತು ಟೀಸರ್ ಬಿಡುಗಡೆಯನ್ನು ಡಿ ಬಾಸ್ ದರ್ಶನ್ ಮಾಡಲಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಳಿಯ ಮನೋಜ್ ಈ ಸಿನಿಮಾದ ನಾಯಕ. ಹೀಗಾಗಿಯೇ ಈ ಸಿನಿಮಾದ ಟೀಸರ್ ಬಿಡುಗಡೆಯನ್ನು ದರ್ಶನ್ ಕೈಯಲ್ಲೇ ಮಾಡಿಸಲು ಚಿತ್ರತಂಡ ನಿರ್ಧರಿಸಿದೆ.

ಸೆಪ್ಟೆಂಬರ್ 7 ರಂದು ಅಡಿಯೋ ಮತ್ತು ಟೀಸರ್ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ರಾಜಹಂಸ ಸಿನಿಮಾ ಬಳಿಕ ರಂಜಿನಿಗೆ ಇದು ಎರಡನೇ ಸಿನಿಮಾವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ