ಐಷರಾಮಿ ಮನೆಯ ಒಡತಿಯಾದ ಪ್ರಿಯಾಂಕ ಚಿಂಚೋಳಿ: ಗೃಹಪ್ರವೇಶದ ಫೋಟೋ ಹಂಚಿಕೊಂಡ 'ಮನಸೆಲ್ಲ' ನಟಿ
ಗೋ ಪೂಜೆ, ತೋರಣ ಪೂಜೆ ನೇರವೇರಿಸಿದ ದಂಪತಿ ಫೋಟೋಗೆ ಪೋಸ್ ನೀಡಿದ್ದಾರೆ. ಪ್ರಿಯಾಂಕ ಅವರು 2021 ಡಿಸೆಂಬರ್ 10 ರಂದು ಬೆಂಗಳೂರಿನ ರಾಕೇಶ್ ಎಂಬವರನ್ನು ಮದುವೆಯಾದರು. ಇನ್ನೂ ಇವರದ್ದು ಆರೇಜ್ ಮ್ಯಾರೇಜ್ ಆಗಿದ್ದು, ರಾಕೇಶ್ ಅವರು ಅಮೇರಿಕಾದ ಬ್ಯಾಂಕ್‌ವೊಂದರಲ್ಲಿ ಉಪಾಧ್ಯಕ್ಷರಾಗಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಹರ ಹರ ಮಹಾದೇವ' ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಈ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರವನ್ನು ನಿರ್ವಹಿಸಿದ್ದರು. ಅವರು ಉದಯ ಟಿವಿಯಲ್ಲಿನ ಪ್ರಸಿದ್ಧ ಕನ್ನಡ ಧಾರಾವಾಹಿಗಳಾದ ಜೈ ಹನುಮಾನ್ ಮತ್ತು ಮನಸಾರೆ ಮತ್ತು ಸ್ಟಾರ್ ಸುವರ್ಣದಲ್ಲಿ ಮನಸೆಲ್ಲಾ ನೀನೆ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾರೆ.