ವಿಷ್ಣು ಸರ್ ಬಗ್ಗೆ ಮಾತನಾಡಿದ ಆ ನಟ ಕ್ಷಮೆ ಕೇಳಬೇಕು: ವಿಜಯ ರಂಗರಾಜುಗೆ ಪುನೀತ್ ಎಚ್ಚರಿಕೆ

ಶನಿವಾರ, 12 ಡಿಸೆಂಬರ್ 2020 (16:45 IST)
ಬೆಂಗಳೂರು: ಸಾಹಸಸಿಂಹ  ವಿಷ್ಣುವರ್ಧನ್ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿರುವ ತೆಲುಗು ನಟ ವಿಜಯ ರಂಗರಾಜು ಕ್ಷಮೆ ಕೋರುವಂತೆ ನಟ ಪುನೀತ್ ರಾಜಕುಮಾರ್ ಆಗ್ರಹಿಸಿದ್ದಾರೆ.


‘ನಮ್ಮ ನಾಡಿನ ಮೇರುನಟರಲ್ಲಿ ಒಬ್ಬರಾಗಿರುವ ವಿಷ್ಣು ಸರ್ ಬಗ್ಗೆ ಅವಹೇಳನ ಮಾಡಿರುವ ಆ ಕಲಾವಿದ ಕ್ಷಮೆ ಕೇಳಿ ತನ್ನ ಹೇಳಿಕೆ ಹಿಂಪಡೆಯಬೇಕು. ಭಾರತೀಯ ಚಿತ್ರರಂಗ ನಮ್ಮ ಮನೆ ಎಲ್ಲ ಕಲಾವಿದರು ಒಂದು ಕುಟುಂಬ. ಕಲೆಗೆ ಗೌರವಿಸೋದು ನಮ್ಮ ಕರ್ತವ್ಯ. ಒಬ್ಬ ಕಲಾವಿದನಿಗಿರಬೇಕಾದ ಮೊದಲ ಅರ್ಹತೆ ಸಹೋದ್ಯೋಗಿ ಕಲಾವಿದರ ಬಗ್ಗೆ ಗೌರವ ಹಾಗೂ ಪ್ರೀತಿಯನ್ನು ತೋರುವುದು. ಯಾವುದೇ ಭಾಷೆಯ ಕಲಾವಿದರಾದರೂ ಗೌರವ ಮೊದಲು. ಮೊದಲು ಮಾನವನಾಗು’ ಎಂದು ಪುನೀತ್ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ