ಕಥಾ ಸಂಗಮ ಸಿನಿಮಾದ ಅಡಿಯೋ ರಿಲೀಸ್ ಮಾಡಿದ್ದಕ್ಕೆ ಪುನೀತ್ ರಾಜ್ ಕುಮಾರ್ ಗೆ ಸಿಕ್ತು ಮರೆಯಲಾರದ ಗಿಫ್ಟ್!

ಶುಕ್ರವಾರ, 22 ನವೆಂಬರ್ 2019 (09:26 IST)
ಬೆಂಗಳೂರು: ರಿಷಬ್ ಶೆಟ್ಟಿ ನಿರ್ಮಾಣದ ಏಳು ನಿರ್ದೇಶಕರು ನಿರ್ದೇಶಿಸಿದ ಸಿನಿಮಾ ಕಥಾ ಸಂಗಮ. ಕಥಾ ಸಂಗಮ ಸಿನಿಮಾ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನಿನ್ನೆ ಸಂಜೆ ನೆರವೇರಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಲಾಂಚ್ ಮಾಡಿದ್ದಾರೆ.


ಏಳು ಸಂಗೀತ ನಿರ್ದೇಶಕರು ಮಾಡಿರುವ ಏಳು ವಿಭಿನ್ನ ಹಾಡುಗಳು ನಿನ್ನೆ ಬಿಡುಗಡೆಯಾಗಿವೆ. ರಿಷಬ್ ಮೊದಲೇ ಹೇಳಿರುವಂತೆ ಇದು ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಂದ ಸ್ಪೂರ್ತಿ ಪಡೆದು ಮಾಡಿದ ಸಿನಿಮಾ. ಹೀಗಾಗಿ ಧ‍್ವನಿ ಸುರುಳಿ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್ ಗೆ ಚಿತ್ರತಂಡ ಮರೆಯಲಾರದ ಗಿಫ್ಟ್ ಕೊಟ್ಟು ಸನ್ಮಾನಿಸಿದೆ.

ಪುಟ್ಟಣ್ಣ ಕಣಗಾಲ್ ಜತೆಗೆ ಡಾ. ರಾಜ್ ಕುಮಾರ್ ಇರುವ ಆತ್ಮೀಯ ಕ್ಷಣದ ಬ್ಲ್ಯಾಕ್ ಆಂಡ್ ವೈಟ್ ಫೋಟೋವನ್ನು ಪುನೀತ್ ಗೆ ಚಿತ್ರತಂಡ ಕಾಣಿಕೆಯಾಗಿ ನೀಡಿದೆ. ಪುನೀತ್ ಕೂಡಾ ರಿಷಬ್ ಆಂಡ್ ಟೀಂ ಕೊಟ್ಟ ಗಿಫ್ಟ್ ನೋಡಿ ತುಂಬಾ ಖುಷಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ