ಅನಿತಾ ಭಟ್ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಪುನೀತ್ ರಾಜ್ ಕುಮಾರ್
ಶನಿವಾರ, 9 ಅಕ್ಟೋಬರ್ 2021 (09:15 IST)
ಬೆಂಗಳೂರು: ಬಹಳ ದಿನಗಳ ನಂತರ ನಟಿ ಅನಿತಾ ಭಟ್ ಹೊಸ ಸಿನಿಮಾದೊಂದಿಗೆ ನಿಮ್ಮ ಮುಂದೆ ಬರುತ್ತಿದ್ದಾರೆ. ಅವರ ಇಂದಿರಾ ಎನ್ನುವ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹೆಸರೇ ಹೇಳುವಂತೆ ಇದು ಮಹಿಳಾಧಾರಿತ ಕತೆಯಿರುವ ಸಿನಿಮಾವಾಗಿದೆ.
ತಮ್ಮ ಹೋಂ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ ಅನಿತಾ. ಅನಿತಾ ಭಟ್ ಜೊತೆಗೆ ಕೆಲವು ಹೊಸಬರ ಬಳಗ ಚಿತ್ರಕ್ಕೆ ಕೆಲಸ ಮಾಡುತ್ತಿದೆ. ಈ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಮೂಡಿಬರಲಿದೆ.