ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಮಕ್ಕಳ ಸಿನಿಮಾ ಮಾಡುವಾಸೆಯಂತೆ!

ಗುರುವಾರ, 13 ಫೆಬ್ರವರಿ 2020 (11:15 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈಗ ತಮ್ಮದೇ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಹೊಸಬರ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಈ ಮೂಲಕ ಸದಭಿರುಚಿಯ, ಪ್ರಯೋಗಾತ್ಮಕ ಚಿತ್ರಗಳನ್ನು ಸ್ಯಾಂಡಲ್ ವುಡ್ ಗೆ ನೀಡುವ ಆಸೆ ಹೊಂದಿದ್ದಾರೆ.


ಕವಲು ದಾರಿ ಎನ್ನುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನಿರ್ಮಿಸಿದ್ದ ಅಪ್ಪು ಈಗ ‘ಮಾಯಾಬಜಾರ್ 2016’ ಎನ್ನುವ ಮತ್ತೊಂದು ರೋಮಾಂಚಕ ಸಿನಿಮಾವನ್ನು ತೆರೆಗೆ ತರಲು ರೆಡಿಯಾಗಿದ್ದಾರೆ.

ಇದೀಗ ಪುನೀತ್ ಗೆ ತಮ್ಮ ನಿರ್ಮಾಣದಲ್ಲಿ ಮಕ್ಕಳ ಸಿನಿಮಾ ಮಾಡುವ ಆಸೆಯಿದೆಯಂತೆ. ಅದಕ್ಕೆ ಪುನೀತ್ ಗೆ ಪ್ರೇರಣೆಯಾಗಿರುವುದು ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ. ಒಂದು ಮಕ್ಕಳ ಸಿನಿಮಾವನ್ನೂ ಈ ರೀತಿಯಾಗಿ ಕಮರ್ಷಿಯಲ್ ಆಗಿ ಎಲ್ಲಾ ವರ್ಗದ ಜನರಿಗೂ ಮುಟ್ಟುವಂತೆ ಮಾಡಬಹುದು ಎಂದು ತೋರಿಸಿಕೊಟ್ಟ ಸಿನಿಮಾವದು. ಈಗ ಅಂತಹದ್ದೇ ಕತೆ ಬಂದರೆ ಸಿನಿಮಾ ನಿರ್ಮಿಸಬೇಕೆಂಬುದು ಅಪ್ಪ ಆಸೆಯಂತೆ. ಆ ಮೂಲಕ ತಮ್ಮ ಬ್ಯಾನರ್ ನಲ್ಲಿ ಮತ್ತೊಂದು ಪ್ರಯೋಗಾತ್ಮಕ ಸಿನಿಮಾಗೆ ಅವಕಾಶ ನೀಡಲು ಉದ್ದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ