ಪುಟ್ಟ ಅಭಿಮಾನಿ ಆಸೆ ನೆರವೇರಿಸಿದ ನಟ ಪುನೀತ್ ರಾಜಕುಮಾರ್

ಬುಧವಾರ, 12 ಫೆಬ್ರವರಿ 2020 (14:19 IST)
ಸ್ಯಾಂಡಲ್ ವುಡ್ ನಟ ಪುನೀತ್ ರಾಜಕುಮಾರ ತಮ್ಮ ಪುಟ್ಟ ಅಭಿಮಾನಿಯ ಆಸೆಯನ್ನು ನೆರವೇರಿಸಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರನ್ನು ನೋಡಲೇಬೇಕು. ಹೀಗಂತ ಜೀವ ಕೈಯಲ್ಲಿ ಹಿಡಿದು ಕಾಯ್ತಿದ್ದ ಅಭಿಮಾನಿ ಬಾಲಕನನ್ನು ಅಪ್ಪು ಭೇಟಿ ಮಾಡಿದ್ದಾರೆ.

ತೀವ್ರ ಸ್ವರೂಪದ ಖಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸಾ ವೆಚ್ಚವನ್ನು ಅಪ್ಪು ಭರಿಸಿದ್ದಾರೆ. ಅಪ್ಪು ಅಭಿಮಾನಿಯಾಗಿರೋ ಬಾಲಕ ಹೊಸಪೇಟೆಯ ಆದರ್ಶ್ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಬಳ್ಳಾರಿಯಿಂದ ಬೆಂಗಳೂರಿಗೆ ಕರೆಸಿಕೊಂಡು ಮಾತನಾಡಿ, ಚಿಕಿತ್ಸಾ ವೆಚ್ಚವನ್ನೂ ಪವರ್ ಸ್ಟಾರ್ ಭರಿಸಿ ಮಾದರಿಯಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ