ಪುಷ್ಪ 2 ರಿಲೀಸ್ ಮುಂದೂಡಿಕೆ ಸಾಧ್ಯತೆ

ಶುಕ್ರವಾರ, 26 ಮೇ 2023 (08:30 IST)
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ 2 ಸಿನಿಮಾ ರಿಲೀಸ್ ಮತ್ತಷ್ಟು ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಈಗಷ್ಟೇ ಪುಷ್ಪ 2 ಚಿತ್ರೀಕರಣ ಪ್ರಾರಂಭದ ಹಂತದಲ್ಲಿದೆ. ಇದಕ್ಕೆ ಮೊದಲು ಚಿತ್ರವನ್ನು ಮುಂದಿನ ವರ್ಷ ಅಂದರೆ 2024 ಮೇ ತಿಂಗಳ ಮೊದಲ ಸಿನಿಮಾ ಬಿಡುಗಡೆ ಮಾಡಲು ಯೋಜನೆ ನಡೆಸಲಾಗಿತ್ತು.

ಆದರೆ ಇದು ಮತ್ತಷ್ಟು ಮುಂದೂಡಿಕೆಯಾಗುವ ನಿರೀಕ್ಷೆಯಿದೆ. ಚಿತ್ರವನ್ನು ಇನ್ನಷ್ಟು ವೈಭವಯುತವಾಗಿ ಪ್ರೇಕ್ಷಕರಿಗೆ ಕಟ್ಟಿಕೊಡಲು ಬಯಸಿರುವ ನಿರ್ದೇಶಕರು ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಮತ್ತಷ್ಟು ಸಮಯ ತೆಗೆದುಕೊಳ್ಳಲಿದ್ದಾರಂತೆ. ಹೀಗಾಗಿ ಸಿನಿಮಾ ರಿಲೀಸ್ ತಡವಾಗಬಹುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ