ಭೂಗತ ದೊರೆ ದಾವೊದ್ ಗ್ಯಾಂಗ್ ಜೊತೆ ಊಟ ಮಾಡಿದ ಆರ್ ಜಿವಿ

ಮಂಗಳವಾರ, 2 ಫೆಬ್ರವರಿ 2021 (10:00 IST)
ಹೈದರಾಬಾದ್ : ವಿವಾದಾತ್ಮಕ ನಿರ್ದೇಶಕರೆಂದೇ ಪ್ರಖ್ಯಾತರಾದ ರಾಮ್ ಗೋಪಾಲ್ ವರ್ಮಾ ಅವರು ಕೆಲವರ ನೈಜ ಜೀವನದ ಕಥೆಗಳನ್ನು ಚಿತ್ರ ಮಾಡಲು ಹೋಗಿ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಇದೀಗ ಅವರು ಭೂಗತ ದೊರೆ ದಾವೊದ್ ಜೀವನಚರಿತ್ರೆ ‘ಡಿ ಕಂಪೆನಿ ‘ ಚಿತ್ರ ಮಾಡಲು ಹೊರಟಿದ್ದಾರೆ.

ಭೂಗತ ಜಗತ್ತನ್ನು ಆಳಲು ದಾವೊದ್ ಇಬ್ರಾಹಿಂ ಸಣ್ಣ ಗ್ಯಾಂಗ್ ನಾಯಕನಿಂದ ದೊಡ್ಡ ದರೋಡೆಕೋರನಾಗಿ ಹೇಗೆ ಬೆಳೆದ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಈ ನಡುವೆ ಆರ್ ಜಿವಿ ಈ ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದ ಪೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ  ಅವರು ದಾವೊದ್ ಗ್ಯಾಂಗ್ ಜೊತೆ ಊಟ ಮಾಡುತ್ತಿದ್ದರು. ಇದು ತಮ್ಮ ಕನಸಿನ ಚಿತ್ರವೆಂದು ಅವರು ಘೋಷಿಸಿದ್ದಾರೆ. ಈ ಚಿತ್ರ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ