ಬಿಬಿಎಂಪಿ ನಕಲಿ ಬಿಲ್ ಎ. ಸಿ. ಬಿ. ಶಾಕ್

ಸೋಮವಾರ, 28 ಫೆಬ್ರವರಿ 2022 (16:40 IST)
ಬಿಬಿಎಂಪಿ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ನಡೆಸಿದ ದಾಳಿಯಲ್ಲಿ ಭಾರೀ ಮೊತ್ತದ ಅಕ್ರಮಗಳು ಹೊರ ಬಿದ್ದಿದೆ. ಸಾಕಷ್ಟು ದಾಖಲೆಗಳ ಜಪ್ತಿ ನಡುವೆ ಎಸಿಬಿ ಅಧಿಕಾರಿಗಳು ಕೂಡ ದಾಳಿ ಮುಂದುವರೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ಎಸಿಬಿಯ 200 ಅಧಿಕಾರಿಗಳು ಬಿಬಿಎಂಪಿಯ 27 ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ವಿವಿಧ ವಿಭಾಗಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ನೂರಾರು ಕೋಟಿಯ ಅಕ್ರಮಗಳು ಬೆಳಕಿಗೆ ಬಂದಿವೆ.
 
ಜಾಹೀರಾತು ವಿಭಾಗದಲ್ಲಿ 230 ಕೋಟಿ ಅಕ್ರಮ: ಬೆಂಗಳೂರು ಮಹಾ ನಗರ ಪಾಲಿಕೆ ಪಿಪಿಪಿ ಮಾದರಿಯಲ್ಲಿ ಬಸ್ ತಂಗುದಾಣ ಮತ್ತು ಸ್ಕೈವಾಕ್ ನಿರ್ಮಾಣ ಮಾಡುವ ಏಜೆನ್ಸಿಗಳು ಜಾಹೀರಾತು ಪ್ರದರ್ಶನ ಸಂಬಂಧ ಹಣವನ್ನು ಪಾವತಿಸಿಲ್ಲ. ಬಿಬಿಎಂಪಿ ಅಧಿಕಾರಿಗಳು ಖಾಸಗಿ ಏಜೆನ್ಸಿಗಳ ಜತೆ ಶಾಮೀಲಾಗಿ ಜಾಹೀರಾತು ಏಜೆನ್ಸಿಗಳಿಗೆ ಲಾಭ ಮಾಡಿಕೊಟ್ಟಿದ್ದು, ಬಿಬಿಎಂಪಿ ಜಾಹೀರಾತು ವಿಭಾಗಕ್ಕೆ ಸಂದಾಯವಾಗಬೇಕಿದ್ದ 230 ಕೋಟಿ ರೂ. ಹಣವನ್ನು ಬಾಕಿ ಇಟ್ಟುಕೊಳ್ಳಲಾಗಿದೆ. ಒಂದು ವರ್ಷದಿಂದ ಟೆಂಡರ್ ಕರೆಯದೇ ವಿಳಂಬ ನೀತಿ ಅನುಸರಿಸಿ ಜಾಹೀರಾತು ಕಂಪನಿಗಳಿಗೆ ಕೋಟಿ ಕೋಟಿ ಲಾಭ ಮಾಡಿಕೊಟ್ಟು ಬಿಬಿಎಂಪಿ ಅಧಿಕಾರಿಗಳು ಅಕ್ರಮ ಎಸಗಿರುವುದು ಕಂಡು ಬಂದಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ