ಎರಡು ತಿಂಗಳ ಬಳಿಕ ದರ್ಶನ್ ನೋಡಲು ಜೈಲಿಗೆ ಬಂದ ರಚಿತಾ ರಾಮ್
ರಚಿತಾ ರಾಮ್ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದು ದರ್ಶನ್ ರನ್ನು ಭೇಟಿ ಮಾಡಿದ್ದಾರೆ. ರಚಿತಾ ಜೊತೆಗೆ ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ್ ಕೂಡಾ ಇದ್ದರು. ಇಬ್ಬರೂ ಇಂದು ಪರಪ್ಪನ ಅಗ್ರಹಾರ ಜೈಲಿನ ಹೊರಾವರಣದಲ್ಲಿ ಕಾಣಿಸಿಕೊಂಡಿದ್ದಾರೆ.
ದರ್ಶನ್ ಜೈಲು ಸೇರಿದ ಬಳಿಕ ಇದುವರೆಗೆ ಅವರ ಅನೇಕ ಆಪ್ತರು ಬಂದು ಭೇಟಿ ಮಾಡಿಕೊಂಡು ಹೋಗಿದ್ದಾರೆ. ವಾರದಲ್ಲಿ ಇಬ್ಬರಿಗೆ ಮಾತ್ರ ದರ್ಶನ್ ಭೇಟಿಗೆ ಅವಕಾಶವಿದೆ. ಮೊನ್ನೆಯಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ರನ್ನು ಭೇಟಿ ಮಾಡಿಕೊಂಡು ಹೋಗಿದ್ದರು.
ಕಳೆದ ವಾರ ಒಂದು ದಿನ ವಿಜಯಲಕ್ಷ್ಮಿ ಬಂದಿದ್ದರೆ ಮತ್ತೊಂದು ದಿನ ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಮುಂತಾದವರು ಬಂದು ದರ್ಶನ್ ಭೇಟಿ ಮಾಡಿಕೊಂಡು ಹೋಗಿದ್ದರು. ಇಂದು ರಚಿತಾ ರಾಮ್ ಜೈಲಿಗೆ ಬಂದಿದ್ದಾರೆ. ದರ್ಶನ್ ಕುಟುಂಬದವರಿಗೆ ಭೇಟಿಗೆ ಅವಕಾಶ ನೋಡಿಕೊಂಡು ಇತರರಿಗೆ ಅವಕಾಶ ನೀಡಲಾಗುತ್ತಿದೆ.