ಅಕ್ಕನ ಮದುವೆಯಾದ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ಟ ರಚಿತಾ ರಾಮ್

ಸೋಮವಾರ, 9 ಡಿಸೆಂಬರ್ 2019 (09:29 IST)
ಬೆಂಗಳೂರು: ಅಕ್ಕ ನಿತ್ಯಾರಾಮ್ ಮದುವೆ ಸಂಭ್ರಮದಲ್ಲಿದ್ದ ರಚಿತಾ ರಾಮ್ ಕೆಲವು ದಿನ ಶೂಟಿಂಗ್ ನಿಂದ ಬಿಡುವು ತೆಗೆದುಕೊಂಡಿದ್ದರು. ಆದರೆ ಕಿರು ಬಿಡುವಿನ ನಂತರ ಇದೀಗ ಹೊಸ ಸುದ್ದಿಯೊಂದಿಗೆ ಸಿನಿಮಾಕ್ಕೆ ಮರಳಿದ್ದಾರೆ.


ರಚಿತಾ ಈಗ ತೆಲುಗು ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವ ಸುದ್ದಿ ಕೇಳಿಬಂದಿದೆ. ಮೆಗಾಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ನಾಯಕರಾಗಿ ಅಭಿನಯಿಸುತ್ತಿರುವ ಸೂಪರ್ ಮಿರ್ಚಿ ಎಂಬ ಹೆಸರಿನ ಸಿನಿಮಾಗೆ ರಚಿತಾ ನಾಯಕಿಯಾಗಿದ್ದಾರೆ.

ಈಗಾಗಲೇ ಐ ಲವ್ ಯೂ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಿತವಾಗಿರುವ ರಚಿತಾ ಈಗ ಪೂರ್ಣಪ್ರಮಾಣದ ತೆಲುಗು ಸಿನಿಮಾಗೆ ನಾಯಕಿಯಾಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ