ಕೊನೆಗೂ ಜ್ಯೂನಿಯರ್ ರಾಕಿ ಬಾಯ್ ಗೆ ಹೆಸರು ಫಿಕ್ಸ್! ಬಹಿರಂಗಪಡಿಸಿದ ರಾಧಿಕಾ ಪಂಡಿತ್
ಸೋಮವಾರ, 24 ಆಗಸ್ಟ್ 2020 (11:51 IST)
ಬೆಂಗಳೂರು: ರಾಧಿಕಾ ಪಂಡಿತ್-ಯಶ್ ಮುದ್ದಿನ ಮಗನ ಹೆಸರು ಏನೆಂದು ಅಭಿಮಾನಿಗಳಲ್ಲಿ ಕುತೂಹಲವಿದೆ. ಕೊನೆಗೂ ಜ್ಯೂನಿಯರ್ ರಾಕಿ ಬಾಯ್ ಗೆ ಏನು ಹೆಸರಿಡುತ್ತಾರೆ ಎನ್ನುವುದು ಗೊತ್ತಾಗಲಿದೆ.
ಈ ಬಗ್ಗೆ ರಾಧಿಕಾ ಹೇಳಿಕೊಂಡಿದ್ದು, ಸದ್ಯದಲ್ಲೇ ನೀವೆಲ್ಲರೂ ನಿರೀಕ್ಷಿಸಿದಂತೆ ಜ್ಯೂನಿಯರ್ ಹೆಸರು ಬಹಿರಂಗಪಡಿಸುತ್ತೇವೆ. ಆದರೆ ಅವನ ಹೆಸರು ಆಯುಷ್ ಎಂದಲ್ಲ ಎಂದು ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಈ ಮೊದಲು ನಟಿ ರಮ್ಯಾ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾ ಕಾಮೆಂಟ್ ನಲ್ಲಿ ಜ್ಯೂನಿಯರ್ ಯಶ್ ಹೆಸರನ್ನು ಆಯುಷ್ ಎಂದಿದ್ದರು. ಹೀಗಾಗಿ ಯಶ್-ರಾಧಿಕಾ ಮಗನ ಹೆಸರು ಆಯುಷ್ ಇರಬಹುದು ಎಂದೇ ಎಲ್ಲರೂ ಊಹಿಸಿದ್ದರು.