‘ರಾಣ’ನಿಗಾಗಿ ರಾಗಿಣಿ ಸಖತ್ ಡ್ಯಾನ್ಸ್

ಮಂಗಳವಾರ, 12 ಅಕ್ಟೋಬರ್ 2021 (11:09 IST)
ಬೆಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮತ್ತೆ ಸಿನಿಮಾ ಮೂಲಕ ಸುದ್ದಿಯಲ್ಲಿದ್ದಾರೆ. ಶ್ರೇಯಸ್ ಮಂಜು ನಾಯಕರಾಗಿರುವ ‘ರಾಣ’ ಸಿನಿಮಾದಲ್ಲಿ ಅವರು ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವುದು ಸುದ್ದಿಯಾಗಿದೆ.


‘ಚುಟು ಚುಟು ಅಂತೈತಿ’ ಮುಂತಾದ ಹಿಟ್ ಹಾಡುಗಳನ್ನು ಬರೆದಿರುವ ಶಿವು ಬೇರಗಿ ಬರೆದಿರುವ ಬಿಂದಾಸ್ ಹಾಡೊಂದಕ್ಕೆ ರಾಗಿಣಿ ಸ್ಟೆಪ್ ಹಾಕಲಿದ್ದಾರೆ. ಇಮ್ರಾನ್ ಸರ್ದಾರಿಯಾ ಹಾಡಿಗೆ ನೃತ್ಯ ಸಂಯೋಜಿಸಲಿದ್ದಾರೆ.

ಈ ಮೊದಲು ರಾಗಿಣಿ ಕೆಲವು ಸಿನಿಮಾಗಳಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿ ಸಿನಿಮಾ ಹಿಟ್ ಆಗಲು ಕಾರಣವಾಗಿದ್ದರು. ಡ್ರಗ್ ಕೇಸ್, ಲಾಕ್ ಡೌನ್ ನಡುವೆ ರಾಗಿಣಿ ಕೆಲವು ದಿನಗಳಿಂದ ಸಿನಿಮಾಗಳಿಂದ ದೂರವಿದ್ದರು. ಇದೀಗ ಮತ್ತೆ ಹಾಡೊಂದರ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡಲು ಬರುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ