ಕೆಲವು ಸಿನೆಮಾಗಳೇ ಹಾಗೆ ಶುರುವದಾಗಿನಿಂದ ಒಂದೊಂದೇ ಜಲಕ್ ಬಿಟ್ಟು ಸಿನ್ಮಾ ಮೇಲಿನ ಕುತೂಹಲವನ್ನ ಇಮ್ಮಡಿ ಗೊಳಿಸಿರ್ತಾವೆ. ಈಗೀಗ ಸಸ್ಪೇನ್ಸ್,ಥ್ರಿಲ್ಲರ್ ಹಾಗು ಹಾರಾರ್ ಸಿನ್ಮಗಳು ರೆಗ್ಯುಲರ್ ಕಾನ್ಸೆಪ್ಟ್ ಚಿತ್ರಗಳಿಗಿಂತ ತುಸು ,ಹೆಚ್ಚು ಕ್ಲಿಕ್ ಆಗ್ತಿವೆ. ಅಂಥಹದ್ದೇ ಸಾಲಿಗೆ ಸೇರಿರೋ ಸೂಪರ್ ಎಕ್ಸೈಟೆಡ್ ಚಿತ್ರವೇ ‘ಶಿವಾಜಿ ಸುರತ್ಕಲ್’ .
ಇವರಿಗೆ ನಾಯಕಿಯಾಗಿ 'ರಂಗಿತರಂಗ', 'ಕಾಫಿತೋಟ', 'ಯೂ- ಟರ್ನ್' ನಂತರ ಮತ್ತೊಮ್ಮೆ ರಾಧಿಕಾ ಚೇತನ್ ಸಸ್ಪೆನ್ಸ್ ಕಥಾಹಂದರವಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆರೋಹಿ ನಾರಾಯಣ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಸಸ್ಪೇನ್ಸ್ ಮತ್ತು ಹಾರಾರ್ ಎಲಿಮೆಂಟ್ ನ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿ ಚಿತ್ರದ ಬಗೆಗಿನ ನಾನಾ ಸ್ಟಾಪ್ ಕೌತುಕಕ್ಕೆ ಸ್ಮಾಲ್ ಗ್ಯಾಪ್ ಕೊಟ್ಟಿತ್ತಾದರೂ, ಇದೇ 21 ಕ್ಕೆ ಸಿನ್ಮಾ ರಿಲೀಸ್ ಅಂತ ಗೊತ್ತಾದಮೇಲಂತೂ ಸಿನಿಪ್ರಿಯರು ಫುಲ್ ಖುಷ್ ಆಗಿದ್ದಾರೆ.