ಹಾಸ್ಟೆಲ್ ಹುಡುಗರು ತೆಲುಗು ಡಬ್ಬಿಂಗ್ ಗೆ ಭಾರೀ ಬೇಡಿಕೆ

ಭಾನುವಾರ, 20 ಆಗಸ್ಟ್ 2023 (08:40 IST)
ಹೈದರಾಬಾದ್: ಕನ್ನಡದಲ್ಲಿ ಮೋಡಿ ಮಾಡಿದ್ದ ಹಾಸ್ಟೆಲ್ ಹುಡುಗರು ಸಿನಿಮಾ ಈಗ ತೆಲುಗಿನಲ್ಲಿ ಬಾಯ್ಸ್ ಹಾಸ್ಟೆಲ್ ಟೈಟಲ್ ನಲ್ಲಿ ಡಬ್ ಆಗಿ ತೆರೆ ಕಾಣುತ್ತಿದೆ.

ಆಗಸ್ಟ್ 26 ರಂದು ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಚಿತ್ರತಂಡ ತೆಲುಗು ಟ್ರೈಲರ್ ಬಿಡುಗಡೆ ಮಾಡಿದೆ. ಈ ಟ್ರೈಲರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.

ಬಾಯ್ಸ್ ಹಾಸ್ಟೆಲ್ ತೆಲುಗು ಟ್ರೈಲರ್ ನೋಡಿದ ನೆಟ್ಟಿಗರು ತೆಲುಗಿನಲ್ಲೂ ಈ ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ