ಚಾರ್ಲಿ ನೋಡಿ ರಕ್ಷಿತ್ ಶೆಟ್ಟಿಗೆ ಕರೆ ಮಾಡಿದ ತಲೈವಾ ರಜನೀಕಾಂತ್
ಇದೀಗ ರಕ್ಷತ್ ಗೆ ಸ್ವತಃ ಸೂಪರ್ ಸ್ಟಾರ್ ರಜನೀಕಾಂತ್ ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರಂತೆ. ಈ ವಿಚಾರವನ್ನು ರಕ್ಷಿತ್ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.
ಬೆಳಿಗ್ಗೆ ಸ್ವತಃ ರಜನಿ ಸರ್ ಚಾರ್ಲಿ ಸಿನಿಮಾ ನೋಡಿದ್ದರಂತೆ. ಈವತ್ತು ಬೆಳಿಗ್ಗೆಯೇ ಸರ್ ನನಗೆ ಕರೆ ಮಾಡಿ ಚಾರ್ಲಿ ಸಿನಿಮಾದ ಮೇಕಿಂಗ್, ಕ್ಲೈಮ್ಯಾಕ್ಸ್ ಬಗ್ಗೆ ಕೊಂಡಾಡಿದರು. ಸೂಪರ್ ಸ್ಟಾರ್ ನಿಂದ ಇಂತಹ ಹೊಗಳಿಕೆ ಪಡೆಯಲು ವರ್ಣಿಸಾಗದಷ್ಟು ಖುಷಿಯಾಗುತ್ತಿದೆ. ಧನ್ಯವಾದಗಳು ರಜನಿ ಸರ್ ಎಂದು ರಕ್ಷಿತ್ ಹೇಳಿದ್ದಾರೆ.