ಕುಸ್ತಿಪಟು ರೊಬೆಲ್ ಚಾಲೆಂಜ್ ಸ್ವೀಕರಿಸಿ ಸಂಕಟಕ್ಕೆ ಸಿಲುಕಿದ ನಟಿ ರಾಖಿ ಸಾವಂತ್
ಮಂಗಳವಾರ, 13 ನವೆಂಬರ್ 2018 (07:03 IST)
ಮುಂಬೈ : ಸಿಡಬ್ಲ್ಯೂ ಚಾಂಪಿಯಶಿಪ್ ನಲ್ಲಿ ಕುಸ್ತಿಪಟು ರೊಬೆಲ್ ಚಾಲೆಂಜ್ ಸ್ವೀಕರಿಸಿ ಇದೀಗ ಬಾಲಿವುಡ್ ನಟಿ ರಾಖಿ ಸಾವಂತ್ ಸಂಕಟಪಡುವಂತಾಗಿದೆ.
ಹೌದು. ಭಾನುವಾರ ಪಂಚಕುಲಾದ ದೇವಿಲಾಲ್ ಸ್ಟೇಡಿಯಂನಲ್ಲಿ ನಡೆದ ಸಿಡಬ್ಲ್ಯೂ ಚಾಂಪಿಯನ್ ಶಿಪ್ ನಲ್ಲಿ ರೊಬೆಲ್ ರಿಂಗ್ ಪ್ರವೇಶ ಮಾಡ್ತಿದ್ದಂತೆ ಪಂಚಕುಲಾ ಮಹಿಳೆಯರಿಗೆ ಧಮ್ ಇದ್ರೆ ನನ್ನ ಜೊತೆ ಕುಸ್ತಿಯಾಡಿ ಎಂದು ಸವಾಲು ಹಾಕಿದ್ದಾರೆ. ಆಗ ನಟಿ ರಾಖಿ ಸಾವಂತ್ ಅವರ ಸವಾಲನ್ನು ಸ್ವೀಕರಿಸಿ ರಿಂಗ್ ಒಳಗೆ ಪ್ರವೇಶ ಮಾಡಿದ್ದಾರೆ. ಆ ವೇಳೆ ಮಹಿಳಾ ಕುಸ್ತಿಪಟು ರೊಬೆಲ್, ರಾಖಿ ಸಾವಂತ್ ರನ್ನು ಭುಜದ ಮೇಲೆತ್ತಿ ಕೆಳಗೆ ಎಸೆದಿದ್ದಾರೆ.
ಇದರಿಂದ ಗಾಯಗೊಂಡ ರಾಖಿ ಸಾವಂತ್ ಸ್ವಲ್ಪ ಹೊತ್ತು ರಿಂಗ್ ಒಳಗೆ ನೋವಿನಿಂದ ಒದ್ದಾಡಿದ್ದಾರೆ. ನಂತರ ಅಲ್ಲಿದ್ದವರಿಗೆ ನಟಿ ರಾಖಿ ಸಾವಂತ್ ಗಾಯಗೊಂಡ ಸಂಗತಿ ತಿಳಿದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.