ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಈ ವರ್ಷದ ಮೊದಲ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದ್ದು ಚಿತ್ರರಸಿಕರನ್ನು ಸೆಳೆಯುತ್ತಿದೆ. ಬಾಕ್ಸ್ ಆಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ಚಿತ್ರಕ್ಕೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಸಾಮಾನ್ಯವಾಗಿ ಕನ್ನಡ ಚಿತ್ರಗಳು ನೆರೆರಾಜ್ಯಗಳಲ್ಲಿ ಬಿಡುಗಡೆಯಾವುದು ಬಹಳ ಅಪರೂಪ. ಇದೀಗ ಕಿರಿಕ್ ಪಾರ್ಟಿ ನೆರೆಯ ಚೆನ್ನೈ ಮತ್ತು ಕೊಚ್ಚಿಗಳಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಕನ್ನಡ ಚಿತ್ರಗಳಿಗೆ ಪರರಾಜ್ಯಗಳಲ್ಲೂ ಪ್ರೇಕ್ಷಕರಿದ್ದಾರೆ ಎಂಬಂತಾಗಿದೆ.
ಪರಮವ್ ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ಮಿಸಿದ್ದಾರೆ. ಕಥೆ ಕೂಡ ಅವರದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಸಹ ಚಿತ್ರದಲ್ಲಿ ಪಾಲುದಾರರು.
ರಿಶಬ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಕರಣ್ ಚಾವ್ಲಾ ಕ್ಯಾಮೆರಾ ಇದೆ. ಪಾತ್ರವರ್ಗದಲ್ಲಿ ರಶ್ಮಿಕಾ ಮಂದಣ್ಣ, ಅಚ್ಯುತ ಕುಮಾರ್, ಸಂಯುಕ್ತಾ ಹೆಗ್ಡೆ, ಪ್ರಮೋದ್ ಶೆಟ್ಟಿ ಮುಂತಾದವರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.