ರಾಜ್ ಬಿ ಶೆಟ್ಟಿ ಹೊಸ ಸಿನಿಮಾ ‘ಟೋಬಿ’: ಈ ಸಿನಿಮಾ ಕತೆಗೆ ಸ್ಪೂರ್ತಿ ಏನು?

ಮಂಗಳವಾರ, 13 ಜೂನ್ 2023 (16:58 IST)
Photo Courtesy: Twitter
ಬೆಂಗಳೂರು: ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈಗ ತಮ್ಮ ಹೊಸ ಸಿನಿಮಾ ಟೈಟಲ್ ಅನಾವರಣಗೊಳಿಸಿದ್ದಾರೆ.

ರಾಜ್ ಬಿ ಶೆಟ್ಟಿ ಈ ಮೊದಲು ಗರುಡಗಮನ ವೃಷಭ ವಾಹನ ಎಂಬ ಸಿನಿಮಾ ನಿರ್ದೇಶಿಸಿ, ನಟಿಸಿದ್ದರು. ಆ ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಈಗ ಅದೇ ತಂಡ ಹೊಸ ಸಿನಿಮಾ ಮಾಡಿದ್ದು, ‘ಟೋಬಿ’ ಎಂದು ಟೈಟಲ್ ಅನೌನ್ಸ್ ಆಗಿದೆ. ಈ ಸಿನಿಮಾದ ಚಿತ್ರೀಕರಣವೂ ಮುಗಿದಿದೆ. ಆಗಸ್ಟ್ 25 ರಂದು ಸಿನಿಮಾ ರಿಲೀಸ್ ಆಗುವುದಾಗಿ ಇಂದು ಘೋಷಣೆಯಾಗಿದೆ.

ಈ ಸಿನಿಮಾ ಕತೆಯೇನು ಅದಕ್ಕೆ ಪ್ರೇರಣೆ ಏನೆಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ಇದೊಂದು ಮಾಸ್ ಸಿನಿಮಾ. ಇದೇ ಮೊದಲ ಬಾರಿಗೆ ಇಂತಹದ್ದೊಂದು ಪ್ರಯೋಗಕ್ಕಿಳದಿದ್ದೇವೆ. ಆದರೆ ಇಲ್ಲಿ ಮಾಸ್ ಹೀರೋ ಅಲ್ಲ, ಕತೆಯೇ ಮಾಸ್ ಆಗಿದೆ ಎಂದಿದ್ದಾರೆ. ಇನ್ನು, ಈ ಹಿಂದೆ ತಾವು ಅನುಭವಿಸಿದ್ದ ಘಟನೆಯೊಂದನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಿದ್ದಾರಂತೆ. ತಾವು ಅನುಭವಿಸಿದ ಘಟನೆಯ ಸಿಟ್ಟನ್ನೇ ಸಿನಿಮಾ ರೂಪದಲ್ಲಿ ತೋರಿಸಿದ್ದೇವೆ ಎಂದಿದ್ದಾರೆ ಶೆಟ್ರು. ಅವರ ಸಿನಿಮಾಗಳೆಂದರೆ ನೋಡುವ ಪ್ರತ್ಯೇಕ ಪ್ರೇಕ್ಷಕ ವರ್ಗವೇ ಇದೆ. ಹೀಗಾಗಿ ಈ ಸಿನಿಮಾ ಟೈಟಲ್ ಘೋಷಣೆಯಾಗುತ್ತಿದ್ದಂತೇ ಅಭಿಮಾನಿಗಳ ಕುತೂಹಲ ಮೇರೆ ಮೀರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ