ಅಳಿಯನ ಸ್ಯಾಂಡಲ್ ವುಡ್ ಡೆಬ್ಯೂಟ್ ಗೆ ಸಾಥ್ ಕೊಟ್ಟ ಕಿಚ್ಚ ಸುದೀಪ್

ಬುಧವಾರ, 14 ಜೂನ್ 2023 (16:23 IST)
Photo Courtesy: Twitter
ಬೆಂಗಳೂರು: ಕಿಚ್ಚ ಸುದೀಪ್ ಕುಟುಂಬದ ಕುಡಿ ಸಂಚಿತ್ ಸಂಜೀವ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಖುಷಿ ಸುದ್ದಿಯನ್ನು ಸ್ವತಃ ಸುದೀಪ್ ಹಂಚಿಕೊಂಡಿದ್ದಾರೆ.

ನಾಳೆ ಬೆಳಿಗ್ಗೆ 9.45 ಕ್ಕೆ ಸಿನಿಮಾಗೆ ಚಾಲನೆ ಸಿಗಲಿದೆ. ಚಿತ್ರಕ್ಕೆ ಜಿಮ್ಮಿ ಎಂದು ಟೈಟಲ್ ಇಡಲಾಗಿದ್ದು, ಕಿಚ್ಚ ಕ್ರಿಯೇಷನ್ಸ್ ಜೊತೆ ಕೆ.ಪಿ.ಶ್ರೀಕಾಂತ್, ಮನೋಹರ್ ನಾಯ್ಡು ಬಂಡವಾಳ ಹೂಡಲಿದ್ದಾರೆ.

ಮುಂಬೈನಲ್ಲಿ ನಟನೆಯ ತರಬೇತಿ ಪಡೆದಿರುವ ಸಂಚಿತ್ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದಲ್ಲಿ ತೆರೆ ಹಿಂದೆ ಕೆಲಸ ಮಾಡಿದ್ದರು. ಅದಾದ ಬಳಿಕ ಅವರ ಪದಾರ್ಪಣೆ ಬಗ್ಗೆ ಸುದ್ದಿ ಬರುತ್ತಲೇ ಇತ್ತು. ಅದೀಗ ನಿಜವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ