ಕ್ಯಾಮರಾ ಕಣ್ಣೂ ತಾಕದಂತೆ ಮಗಳನ್ನು ಎಷ್ಟು ಕೇರ್ ಮಾಡ್ತಾರೆ ರಾಮ್ ಚರಣ್

ಶುಕ್ರವಾರ, 23 ಜೂನ್ 2023 (15:59 IST)
ಉಪಾಸನಾಗೆ ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲೇ ಇದ್ದ ಉಪಾಸನಾ ಇಂದು ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ.

ಮನೆಗೆ ತೆರಳುವ ವೇಳೆ ಸಹಜವಾಗಿಯೇ ಜ್ಯೂ.ರಾಮ್‍ ಚರಣ್ ನೋಡಲು ಆಸ್ಪತ್ರೆ ಮುಂದೆ ಮಾಧ್ಯಮಗಳ ದಂಡೇ ನೆರೆದಿತ್ತು. ಈ ವೇಳೆ ರಾಮ್ ಚರಣ್ ತಮ್ಮ ಪತ್ನಿ, ಮಗಳನ್ನು ತುಂಬಾ ಎಚ್ಚರಿಕೆಯಿಂದ ಕಾರಿನೆಡೆಗೆ ಕರೆದುಕೊಂಡು ಹೋದರು. ಅದಕ್ಕಿಂತ ಮೊದಲು ಕ್ಯಾಮರಾಗೆ ಪೋಸ್ ನೀಡುವಾಗ ಯಾವುದೇ ಕಾರಣಕ್ಕೂ ಮಗಳ ಮುಖ ರಿವೀಲ್ ಆಗದಂತೆ ಎಚ್ಚರಿಕೆ ವಹಿಸಿಕೊಂಡರು. ಇಬ್ಬರನ್ನೂ ಕಾರಿನಲ್ಲಿ ಕುಳ್ಳಿರಿಸಿದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ರಾಮ್ ಚರಣ್ ಅಭಿನಂದನೆ ಸಲ್ಲಿಸಿದವರಿಗೆ ಧನ್ಯವಾದ ಸಲ್ಲಿಸಿದರು. ಮಗು ಯಾರ ಹಾಗಿದೆ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ರಾಮ್ ಚರಣ್ ‘ಖಂಡಿತಾ ನನ್ನ ಹಾಗೆಯೇ ಇದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ