ರಮ್ಯಾ ಜನ್ಮದಿನ: ಆ ಒಂದು ಸಿಹಿ ಸುದ್ದಿಗಾಗಿ ಕಾದಿದ್ದಾರೆ ಫ್ಯಾನ್ಸ್

ಬುಧವಾರ, 29 ನವೆಂಬರ್ 2023 (09:20 IST)
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಇಂದು ಜನ್ಮದಿನ. ರಮ್ಯಾ ಇದೀಗ 41 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರ ಜನ್ಮದಿನಕ್ಕೆ ಅಭಿಮಾನಿಗಳು ವಿಶೇಷ ಸುದ್ದಿಗಾಗಿ ಕಾದಿದ್ದಾರೆ.

41 ವರ್ಷವಾದರೂ ರಮ್ಯಾ ಚಿತ್ರರಂಗದಲ್ಲಿ ಈಗಲೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಕೆಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ರಮ್ಯಾ ಇತ್ತೀಚೆಗಷ್ಟೇ ನಿರ್ಮಾಪಕಿಯಾಗಿ ಸ್ವಾತಿ ಮುತ್ತಿನ ಮಳೆ ಹನಿಯೆ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದರು.

ಇದರ ಜೊತೆಗೆ ನಟಿಯಾಗಿಯೂ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಡಾಲಿ ಧನಂಜಯ್ ಜೊತೆಗೆ ಉತ್ತರಕಾಂಡ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಫ್ಯಾನ್ಸ್ ರಮ್ಯಾ ಜನ್ಮದಿನ ನಿಮಿತ್ತ ಉತ್ತರಕಾಂಡ ಸಿನಿಮಾದ ಪೋಸ್ಟರ್ ಅಥವಾ ಅಪ್ ಡೇಟ್ ಬಿಡುಗಡೆಯಾಗುತ್ತದೇನೋ ಎಂದು ಕಾದಿದ್ದಾರೆ.

ಪರಭಾಷಿಕರಿಗೆ ದಿವ್ಯ ಸ್ಪಂದನಾ ಎಂದೇ ಪರಿಚಿತರಾಗಿರುವ ರಮ್ಯಾ ಕೇವಲ ಕನ್ನಡ ಮಾತ್ರವಲ್ಲದೆ, ತಮಿಳಿನಲ್ಲೂ ತಮ್ಮದೇ ಫ್ಯಾನ್ಸ್ ಹೊಂದಿದ್ದಾರೆ. ಅವರ ಜನ್ಮದಿನಕ್ಕೆ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಹಾರೈಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ