ಚಿತ್ರರಂಗಕ್ಕೆ ಮರಳುವ ಸೂಚನೆ ಕೊಡುತ್ತಿದ್ದಾರಾ ರಮ್ಯಾ?!
ಹೀಗೇ ಚಿತ್ರರಂಗದ ಒಂದೊಂದು ಕೆಲಸಗಳಿಗೆ ನಿಧಾನವಾಗಿ ಮರಳುತ್ತಿರುವುದು ನೋಡಿದರೆ ಅವರು ಮತ್ತೆ ಕಮ್ ಬ್ಯಾಕ್ ಮಾಡುವ ಮನಸ್ಸು ಮಾಡಿದ್ದಾರೆ ಎನಿಸುತ್ತಿದೆ. ಕೆಲವು ದಿನಗಳ ಹಿಂದೆ ಮಾಧ‍್ಯಮ ಸಂದರ್ಶನವೊಂದರಲ್ಲಿ ನನ್ನ ಬಳಿ ಕೆಲವು ಸ್ಕ್ರಿಪ್ಟ್ ಬಂದಿದೆ ಎಂದೂ ಹೇಳಿದ್ದರು. ಹೀಗಾಗಿ ಮುಂದೊಂದು ದಿನ ಅವರು ಮತ್ತೆ ಸ್ಯಾಂಡಲ್ ವುಡ್ ಗೆ ಕಾಲಿಟ್ಟರೂ ಅಚ್ಚರಿಯಿಲ್ಲ.