ರಕ್ಷಿತ್ ಶೆಟ್ಟಿ ಸಿನಿಮಾಗಾಗಿ ಕಾಯ್ತಿದ್ದೇನೆ ಎಂದ ನಟಿ ರಮ್ಯಾ
ಈ ಬಗ್ಗೆ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ನಟಿ ರಮ್ಯಾ ಸಿನಿಮಾಗಾಗಿ ಕಾಯ್ತಿದ್ದೇನೆ ಎಂದಿದ್ದಾರೆ.
ಕೆಲವು ಗಾಸಿಪ್ ಕಾಲಂಗಳಲ್ಲಿ ರಮ್ಯಾ ಮತ್ತು ರಕ್ಷಿತ್ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೆಲವು ಸಮಯದ ಹಿಂದೆ ಹರಡಿದ್ದವು. ಈಗ ರಮ್ಯಾ, ರಕ್ಷಿತ್ ಸಿನಿಮಾಗೆ ಪ್ರತಿಕ್ರಿಯಿಸಿರುವುದಕ್ಕೆ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ. ಇನ್ನು, ರಮ್ಯಾ ಪ್ರತಿಕ್ರಿಯೆಗೆ ರಕ್ಷಿತ್ ಕೂಡಾ ಧನ್ಯವಾದ ಸಲ್ಲಿಸಿದ್ದಾರೆ.