ಸಿನಿಮಾ ಕೆಲಸಕ್ಕೆ ಮರಳಿದ ಮೋಹಕ ತಾರೆ ರಮ್ಯಾ

ಗುರುವಾರ, 9 ಸೆಪ್ಟಂಬರ್ 2021 (09:20 IST)
ಬೆಂಗಳೂರು: ಮೋಹಕ ತಾರೆ ರಮ್ಯಾ ಕಳೆದ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರವೇ ಇದ್ದಾರೆ. ಆದರೆ ಈಗ ಸಿನಿಮಾ ಪ್ರಯುಕ್ತ ರಮ್ಯಾ ಸುದ್ದಿಯಾಗಿದ್ದಾರೆ.


ಕನ್ನಡ ನಟ ನೀನಾಸಂ ಸತೀಶ್ ತಮಿಳಿನಲ್ಲಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈ ಸಿನಿಮಾಗೆ ‘ಪಗೈವನುಕು ಅರುಳ್ವಾಯ್’ ಎಂದು ಟೈಟಲ್ ಇಡಲಾಗಿದೆ.

ಈ ಸಿನಿಮಾದ ಅಧಿಕೃತ ಪೋಸ್ಟರ್ ನ್ನು ರಮ್ಯಾ ಲಾಂಚ್ ಮಾಡಿದ್ದಾರೆ. ಆ ಮೂಲಕ ಹಲವು ದಿನಗಳ ನಂತರ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ನಮ್ಮ ಕನ್ನಡದ ನಟ ಬೇರೆ ಭಾಷೆಯಲ್ಲಿ ಮಿಂಚುವುದು ಹೆಮ್ಮೆಯ ಸಂಗತಿ ಎಂದಿರುವ ರಮ್ಯಾ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ