ಯಾರು ಸರಿ, ಯಾರು ತಪ್ಪು ಎಂದು ಪರೀಕ್ಷಿಸಲು ನ್ಯಾಯಾಲಯಕ್ಕೆ ಬಂದಿದ್ದೇನೆ: ಕಿಚ್ಚ ಸುದೀಪ್
ಶನಿವಾರ, 15 ಜುಲೈ 2023 (18:10 IST)
ಬೆಂಗಳೂರು: ತಮ್ಮ ಮೇಲೆ ಆರೋಪ ಮಾಡಿದ್ದ ನಿರ್ಮಾಪಕರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ ಬಳಿಕ ಮಾಧ‍್ಯಮಗಳೊಂದಿಗೆ ಮಾತನಾಡಿರುವ ಕಿಚ್ಚ ಸುದೀಪ್ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಸತ್ಯ ಯಾವುದು ಸುಳ್ಳು ಯಾವುದು ಎಂದು ಒಂದಲ್ಲಾ ಒಂದು ದಿನ ಹೊರಗೆ ಬರಲೇಬೇಕು. ನಾನು ಸತ್ಯದ ದಾರಿಯಲ್ಲಿ ನಡೆಯುತ್ತಿದ್ದೀನಾ ಎಂದು ಪರೀಕ್ಷಿಸಿಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ಯಾವುದು ಎಲ್ಲಿ ಇತ್ಯರ್ಥ ಆಗಬೇಕೋ, ಅಲ್ಲಿ ಆಗುತ್ತದೆ ಎಂದಿದ್ದಾರೆ.
ಇನ್ನು ಹಣಕಾಸಿನ ನಷ್ಟಕ್ಕೆ ನಿರ್ಮಾಪಕರಿಗೆ ಸುದೀಪ್ ಸಹಾಯ ಮಾಡಬಹುದಿತ್ತು ಎಂಬ ಆರೋಪಗಳಿಗೆ ಉತ್ತರಿಸಿರುವ ಅವರು ನಾನು ಕಲಾವಿದನಾಗುವಾಗ ಎಲ್ಲರಿಗೂ ಸಹಾಯ ಮಾಡ್ತೀನಿ ಎಂದು ಭರವಸೆ ಕೊಟ್ಟು ಚ್ಯಾರಿಟೇಬಲ್ ಟ್ರಸ್ಟ್ ಓಪನ್ ಮಾಡಿಲ್ಲ. ಬಾಯಿ ಇದೆ ಎಂದು ಮಾತನಾಡಬಾರದು, ಕಾಲು ಇದೆ ಎಂದು ಸಿಕ್ಕಿದ್ದಲ್ಲೆಲ್ಲಾ ಹೋಗಬಾರದು ಎಂದು ಖಡಕ್ ಆಗಿ ಹೇಳಿದ್ದಾರೆ.
ಇನ್ನು ಈ ಎಲ್ಲಾ ಆರೋಪಗಳ ಹಿಂದೆ ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು ಕುಮ್ಮಕ್ಕು ಇದೆ ಎಂಬ ಆರೋಪಗಳ ಪ್ರಶ್ನೆ ಪ್ರಶ್ನಿಸಿದಾಗ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ ಎಂದಷ್ಟೇ ಹೇಳಿದ್ದಾರೆ.