ನಾಗಭೂಷಣ್ ಅತೀ ವೇಗವೇ ಅಪಘಾತಕ್ಕೆ ಕಾರಣ: ಡಿಸಿಪಿ
ಘಟನೆ ವೇಳೆ ನಾಗಭೂಷಣ್ ಮದ್ಯ ಸೇವಿಸಿರಲಿಲ್ಲ ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ. ನಾಗಭೂಷಣ್ ರಕ್ತದ ಮಾದರಿಯನ್ನೂ ಪರೀಕ್ಷೆಗೊಳಪಡಿಸಲಾಗಿತ್ತು.
ಆದರೆ ಅತೀ ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತವಾಗಲು ಕಾರಣ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ನಾಗಭೂಷಣ್ ವಿರುದ್ಧ ರಾಶ್ ಡ್ರೈವಿಂಗ್, ಫುಟ್ಪಾತ್ ಮೇಲೆ ಚಾಲನೆ, ಜೀವಕ್ಕೆ ಹಾನಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಠಾಣೆ ಬೇಲ್ ಮೇಲೆ ನಾಗಭೂಷಣ್ ರನ್ನು ಬಿಡುಗಡೆ ಮಾಡಲಾಗಿದೆ. ಆದರೆ ಮಂಗಳವಾರ ಅವರು ವಿಚಾರಣೆಗೆ ಹಾಜರಾಗಬೇಕಿದೆ.