ಮದುವೆಗೆ ಬಂದ ರಶ್ಮಿಕಾ ಮಂದಣ್ಣ ಕಾಲಿಗೆ ಬಿದ್ದ ಸಹಾಯಕ: ಮುಜುಗರಕ್ಕೀಡಾದ ನಟಿ
ಸೀರೆಯುಟ್ಟು ಸಾಂಪ್ರದಾಯಿಕವಾಗಿ ಕಂಗೊಳಿಸುತ್ತಿದ್ದ ರಶ್ಮಿಕಾ ಮದುವೆಯಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದ್ದರು. ವೇದಿಕೆಗೆ ತೆರಳಿ ಮದುಮಕ್ಕಳಿಗೆ ರಶ್ಮಿಕಾ ಅಕ್ಷತೆ ಹಾಕಿ ಶುಭ ಹಾರೈಸಿದ್ದಾರೆ.
ಈ ವೇಳೆ ಮದುಮಗ-ಮದುಮಗಳು ಇಬ್ಬರೂ ಇದ್ದಕ್ಕಿದ್ದಂತೆ ರಶ್ಮಿಕಾ ಕಾಲಿಗೆ ಬಿದ್ದು ನಮಸ್ಕರಿಸಿದರು. ಈ ವೇಳೆ ಗಲಿಬಿಲಿಗೊಂಡ ರಶ್ಮಿಕಾ ಏನು ಮಾಡಬೇಕೆಂದೇ ತಿಳಿಯದೇ ಅರೆಕ್ಷಣ ಮುಜುಗರ ಅನುಭವಿಸಿದರು. ಬಳಿಕ ಇಬ್ಬರಿಗೂ ಆಶೀರ್ವದಿಸಿ ಕೈ ಮುಗಿದು ಭಾವುಕರಾರು. ಈ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.