ರಶ್ಮಿಕಾ ಮಂದಣ್ಣಗೆ ಕೊನೆಗೂ ಸಿಕ್ಕಿತು ಜಾಕ್ ಪಾಟ್!

ಗುರುವಾರ, 4 ಜುಲೈ 2019 (09:46 IST)
ಬೆಂಗಳೂರು: ತೆಲುಗಿನ ಸೂಪರ್ ಸ್ಟಾರ್ ಗಳಿಗೆ ನಾಯಕಿಯಾದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತಮಿಳು ಸೂಪರ್ ಸ್ಟಾರ್ ವಿಜಯ್ ಜತೆ ಯಾವಾಗ ನಟಿಸುತ್ತಾರೆ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಲೇ ಇದ್ದರು.


ಆ ಪ್ರಶ್ನೆಗೆ ಈಗ ರಶ್ಮಿಕಾ ಉತ್ತರ ನೀಡುತ್ತಿದ್ದಾರೆ. ಇತ್ತೀಚೆಗೆ ವಿಜಯ್ ಬರ್ತ್ ಡೇ ದಿನ ರಶ್ಮಿಕಾ ಟ್ವಿಟರ್ ನಲ್ಲಿ ಶುಭ ಹಾರೈಸಿದ್ದಾಗಲೂ ಅಭಿಮಾನಿಗಳು ನಿಮ್ಮಿಬ್ಬರ ಜೋಡಿಯನ್ನು ಶೀಘ್ರದಲ್ಲೇ ತೆರೆಯಲ್ಲಿ ನೋಡುವ ಭಾಗ್ಯ ನಮ್ಮದಾಗಲಿ ಎಂದು ಆಶಿಸಿದ್ದರು.

ಅದೀಗ ನನಸಾಗುತ್ತಿದೆ. ಹೌದು. ರಶ್ಮಿಕಾ ವಿಜಯ್ ಸಿನಿಮಾಗೆ ನಾಯಕಿಯಾಗುತ್ತಿದ್ದಾರೆ. ವಿಜಯ್ ರ ಮುಂದಿನ ಚಿತ್ರಕ್ಕೆ ರಾಶಿ ಖನ್ನಾ ಮತ್ತು ರಶ್ಮಿಕಾ ನಾಯಕಿಯರಾಗಲಿದ್ದಾರೆ. ಲೋಕೇಶ್ ಕನಗರಾಜ್ ರ ತಳಪತಿ 64 ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಅಲ್ಲಿಗೆ ಅಭಿಮಾನಿಗಳ ಆಸೆ ಕೊನೆಗೂ ನೆರವೇರುತ್ತಿದೆ. ಇತ್ತ ರಶ್ಮಿಕಾಗೆ ತಮಿಳು ಇಳಯದಳಪತಿಗೆ ನಾಯಕಿಯಾಗುವ ಅದೃಷ್ಟ ಕೂಡಿಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ