ಇನ್ಮುಂದೆ ಸಾಮಿ ಸಾಮಿ ಎಂದು ಕುಣಿಯಲ್ಲ ಎಂದ ರಶ್ಮಿಕಾ

ಬುಧವಾರ, 22 ಮಾರ್ಚ್ 2023 (09:57 IST)
Photo Courtesy: Twitter
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಎಲ್ಲೇ ಹೋದರೂ ಅಭಿಮಾನಿಗಳು ಅವರಲ್ಲಿ ಪುಷ್ಪ ಸಿನಿಮಾದ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಲು ಡಿಮ್ಯಾಂಡ್ ಮಾಡ್ತಾರೆ.

ಆದರೆ ಇನ್ನು ರಶ್ಮಿಕಾ ಆ ಹಾಡಿಗೆ ಕುಣಿಯಲ್ವಂತೆ! ಹೀಗೊಂದು ಪ್ರತಿಜ್ಞೆ ಮಾಡಿದ್ದಾರೆ ರಶ್ಮಿಕಾ. ಅದಕ್ಕೆ ಕಾರಣವೇನೆಂದೂ ಅವರು ಹೇಳಿದ್ದಾರೆ. ಅಭಿಮಾನಿಗಳೊಂದಿಗಿನ ಪ್ರಶ್ನೋತ್ತರಾವಳಿ ವೇಳೆ ಅವರಿಗೆ ಅಭಿಮಾನಿಯೊಬ್ಬ ನಿಮ್ಮ ಜೊತೆ ಸಾಮಿ ಸಾಮಿ ಸ್ಟೆಪ್ ಹಾಕಬೇಕು ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ ಇನ್ಮುಂದೆ ನಾನು ಸಾಮಿ ಸಾಮಿ ಎಂದು ಸ್ಟೆಪ್ ಹಾಕಲ್ಲ. ಇನ್ನು ನಾನು ಸಾಮಿ ಸಾಮಿ ಹಾಡಿಗೆ ಸ್ಟೆಪ್ ಹಾಕುತ್ತಿದ್ದರೆ ವಯಸ್ಸಾದ ಮೇಲೆ ನನಗೆ ಬೆನ್ನು ನೋವಿನ ಸಮಸ್ಯೆ ಬರಬಹುದು ಎಂದಿದ್ದಾರೆ. ರಶ್ಮಿಕಾ ಈ ರೀತಿ ಹಾಸ್ಯ ಮಾಡಿದ್ದಾರೋ ಅಥವಾ ಗಂಭೀರವಾಗಿ ಹೇಳಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ