ಕಿರಿಕ್ ಪಾರ್ಟಿಗೆ ಮಾಧ್ಯಮಗಳಿಂದ ಬೊಂಬಾಟ್ ರೇಟಿಂಗ್

ಶನಿವಾರ, 31 ಡಿಸೆಂಬರ್ 2016 (14:10 IST)
ರಕ್ಷಿತ್ ಶೆಟ್ಟಿ ಮತ್ತೆ ಗೆದ್ದಿದ್ದಾರೆ. ಅವರ ಲೇಟೆಸ್ಟ್ ಚಿತ್ರ ಕಿರಿಕ್ ಪಾರ್ಟಿ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ವಿಮರ್ಶಕರ ವಲಯದಲ್ಲಿ ಚಿತ್ರ ಗೆದ್ದಿದೆ. ಇನ್ನು ಬಾಕ್ಸ್ ಆಫೀಸಲ್ಲಿ ಚಿತ್ರ ನಿರೂಪಿಸಿಕೊಳ್ಳಬೇಕಾಗಿದೆ. ಅಲ್ಲಿ ಗೆದ್ದರೆ ಎಲ್ಲಾ ಕಡೆ ಗೆದ್ದಂತೆಯೇ?
 
ಬಹುತೇಕ ಆಂಗ್ಲ ಪತ್ರಿಕೆಗಳು ಚಿತ್ರಗಳು ನಾಲ್ಕು, ನಾಲ್ಕುವರೆ ಸ್ಟಾರ್ ರೇಟಿಂಗ್ ಕೊಟ್ಟಿವೆ. ಕನ್ನಡ ಪತ್ರಿಕೆಗಳೂ ಅಷ್ಟೇ ನಾಲ್ಕು ಸ್ಟಾರ್ ರೇಟಿಂಗ್ ಕೊಟ್ಟಿವೆ. ಎಲ್ಲಾ ಮಾಧ್ಯಮಗಳಲ್ಲೂ ಚಿತ್ರದಕ್ಕೆ ಒಳ್ಳೆಯ ಪ್ರಶಂಸೆ ವ್ಯಕ್ತವಾಗುತ್ತಿದೆ ಅಂದರೆ ಖಂಡಿತವಾಗಿಯೂ ಕಿರಿಕ್ ಪಾರ್ಟಿ ನೋಡುವಂತಹ ಚಿತ್ರ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.
 
ಬಹಳಷ್ಟು ಸನ್ನಿವೇಶಗಳಲ್ಲಿ ತಾಜಾತನ ಇದ್ದು, ಕಾಮಿಡಿ ತುಂಬಾ ಚೆನ್ನಾಗಿ ವರ್ಕೌಟ್ ಆಗಿದೆ. ಅತ್ಯುತ್ತಮ ಮನರಂಜನಾ ಚಿತ್ರ ಎನ್ನುತ್ತಿದ್ದಾರೆ ವೀಕ್ಷಕರು. ಅಜನೀಶ್ ಲೋಕನಾಥ್ ಅವರ ಸಂಗೀತ, ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್‌ಗಳಲ್ಲಿ ಒಂದು ಎಂಬುದು ಎಲ್ಲರ ಅಭಿಮತ. 
 
ರಿಶಬ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಚಿತ್ರದ ಪಾತ್ರವರ್ಗದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ, ಪ್ರಮೋದ್ ಶೆಟ್ಟಿ ಮುಂತಾದವರಿದ್ದಾರೆ. ಸಚಿನ್ ಸಂಕಲನ ಇರುವ ಚಿತ್ರವನ್ನು ಸುಮಾರು ರು.4.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ