ಸದ್ಯದಲ್ಲೇ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ..?

ಶುಕ್ರವಾರ, 11 ಆಗಸ್ಟ್ 2017 (09:21 IST)
ಹಲವು ವರ್ಷಗಳಿಂದ ರಾಜಕೀಯ ಪ್ರವೇಶದ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಕೆಲವೇ ತಿಂಗಳೂಗಳಲ್ಲಿ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು, ತಮ್ಮ ಆಪ್ತರ ಜೊತೆ ರಾಜಕೀಯ ಪ್ರವೇಶದ ಬಗ್ಗೆ ಉಪೇಂದ್ರ ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕೆಲವೇ ತಿಂಗಳೂಗಳಲ್ಲಿ ರಾಜಕೀಯ ಎಂಟ್ರಿ ಬಗ್ಗೆ ಉಪೇಂದ್ರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಯಾವುದೇ ಆತುರ ಮಾಡದೇ ಸಂಪೂರ್ಣ ತಯಾರಿ ಮಾಡಿಕೊಂಡು ಬರುವುದು ಉಪೇಂದ್ರ ಅವರ ಉದ್ದೇಶ ಎನ್ನಲಾಗಿದೆ.

ಇತ್ತೀಚೆಗೆ, ರಾಜಕಾರಣಿಗಳ ಮೇಲಿನ ಆದಾಯ ತೆರಿಗೆ ಇಲಾಖೆಯ ದಾಳಿಗಳ ಕುರಿತಾದ ವಿಡಿಯೋಗಳನ್ನ ಜನರಿಗೆ ತೋರಿಸಬೇಕು. ಜನರಿಗೆ ಸತ್ಯ ತಿಳಿದುಕೊಳ್ಳುವ ಹಕ್ಕಿದೆ ಎಂದು ಉಪ್ಪಿ ಟ್ವೀಟ್ ಮಾಡಿದ್ದರು.

ರಾಜಕಾರಣ, ರಾಜಕೀಯ ರಾಜನೀತಿ ನಮಗೆ ಬೇಕಿಲ್ಲ, ಪ್ರಜಾಕಾರಣ, ಪ್ರಜಾಕೀಯ, ಪ್ರಜಾನೀತಿ ನಮಗೆ ಬೇಕಿರುವುದು ಎಂದು ನಮ್ಮದೇ ಸ್ಟೈಲ್`ನಲ್ಲಿ ಟ್ವೀಟ್ ಮಾಡಿದ್ದಾರೆ.ಪ್ರಜಾಭುತ್ವದಲ್ಲಿ ಕೀ ಪ್ರಜೆಗಳ ಕೈಲ್ಲಿಯರಬೇಕು. ರಾಜರ ಕೈಲ್ಲಲ್ಲ .ಎಂದು ಟ್ವಿಟ್ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ