ಬಿಗ್ ಬಾಸ್ ಗೆ ರೇಖಾ ಕ್ಯಾಪ್ಟನ್

ಮಂಗಳವಾರ, 18 ಅಕ್ಟೋಬರ್ 2016 (13:28 IST)
ಬೆಂಗಳೂರು: ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಈ ವಾರದ ಮಟ್ಟಿಗೆ ಮನೆಯವರೆಲ್ಲಾ ಹೊಸ ಕ್ಯಾಪ್ಟನ್ ನ್ನು ಆಯ್ಕೆ ಮಾಡಿದ್ದಾರೆ. ಐದು ಮತಗಳನ್ನು ಪಡೆದ ನಟಿ ರೇಖಾ  ನಾಯಕನ ಪಟ್ಟಕ್ಕೆ ಆರಿಸಿದ್ದಾರೆ.

ಕಳೆದ ವಾರದ ನಾಯಕ ಕೀರ್ತಿಕುಮಾರ್ ತಮ್ಮ ವಿಶೇಷ ಅಧಿಕಾರವನ್ನು ರೇಖಾಗೆ ವಹಿಸಿದ್ದಾರೆ. ಈ ಪಟ್ಟಕ್ಕೆ ನಟ ಮೋಹನ್ ಮತ್ತು ರೇಖಾ ನಡುವೆ ಪೈಪೋಟಿಯಿತ್ತು. ಅಂತಿಮವಾಗಿ ಮನೆಯವರ ಅತೀ ಹೆಚ್ಚು ಮತ ಪಡೆದ ರೇಖಾ ನಾಯಕಿಯಾದರು.

\ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದವರು ದೊಡ್ಡ ಗಣೇಶ್, ಸಂಜನಾ, ಕಾವ್ಯಾ ಶಾಸ್ತ್ರಿ ಮತ್ತು ಪ್ರಥಮ್. ಇವರಲ್ಲದೆ ನಾಯಕಿ ರೇಖಾ ಅವರು ಸೂಚಿಸಿದ ಶೀತಲ್ ಶೆಟ್ಟಿ ಕೂಡಾ ನಾಮಿನೇಟ್ ಆದವರಲ್ಲಿ ಸೇರಿದ್ದಾರೆ. ಇವರಲ್ಲಿ ಯಾರು ಉಳಿಯುವವರಾರು ಹೊರ ಹೋಗುವವರು ಯಾರು ಎಂದು ಕಾದು ನೋಡಬೇಕಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ