ಮಂಗಳೂರು: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಶತ್ರುಗಳ ಬಗ್ಗೆ ಎಚ್ಚರವಾಗಿರುವಂತೆ ಎಚ್ಚರಿಕೆ ನೀಡಿದೆ. ಮಂಗಳೂರಿನ ಕದ್ರಿಯಲ್ಲಿ ನಡೆದ ದೈವ ಕೋಲದಲ್ಲಿ ಏನಾಯ್ತು ಇಲ್ಲಿದೆ ಡೀಟೈಲ್ಸ್.
ಕಾಂತಾರ ಸಿನಿಮಾ ಎರಡನೇ ಭಾಗದ ಸಿದ್ಧತೆಯಲ್ಲಿರುವ ರಿಷಬ್ ಶೆಟ್ಟಿ ಈಗ ಪಂಜುರ್ಲಿ ದೈವ ಕೋಲದಲ್ಲಿ ಭಾಗಿಯಾಗಿದ್ದಾರೆ. ದೈವದ ಮುಂದೆ ತಮ್ಮ ಸಿನಿಮಾದ ಬಗ್ಗೆ ಹಾಗೂ ಸಂಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ದೈವವೂ ಅಭಯ ನೀಡಿದೆ.
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆಯುತ್ತಿದೆ. ನನಗೆ ಏನಾದರೂ ಸೇವೆ ಮಾಡುತ್ತೇನೆ ಎಂದು ಹರಕೆ ಕಟ್ಟಿಕೊ. ನಿನ್ನೆ ಸಮಸ್ಯೆಯನ್ನು ಆರು ತಿಂಗಳಲ್ಲಿ ಬಗೆಹರಿಸುತ್ತೇನೆ ಎಂದು ದೈವ ಅಭಯ ನೀಡಿದೆ. ದೈವದ ಮುಂದೆ ರಿಷಬ್ ತಮ್ಮ ಸಿನಿಮಾಗಳಿಗೆ ಎದುರಾಗುತ್ತಿರುವ ಸಂಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ರಿಷಬ್ ಇದೀಗ ತೆಲುಗು ಮತ್ತು ಹಿಂದಿಯಲ್ಲೂ ಸಿನಿಮಾ ಒಪ್ಪಿಕೊಂಡಿದ್ದಾರೆ. ಹಿಂದಿಯಲ್ಲಿ ಛತ್ರಪತಿ ಶಿವಾಜಿ ಸಿನಿಮಾದಲ್ಲಿ ಅಭಿನಯಿಸದಂತೆ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಇನ್ನೊಂದೆಡೆ ಕಾಂತಾರ ಚಾಪ್ಟರ್ 1 ಸಿನಿಮಾ ಇನ್ನೂ ಪೂರ್ತಿಯಾಗಿಲ್ಲ. ಈ ಹಿನ್ನಲೆಯಲ್ಲಿ ರಿಷಬ್ ದೈವದ ಮೊರೆ ಹೋಗಿದ್ದಾರೆ.