ಪಂಜುರ್ಲಿ, ಗುಳಿಗ ದೈವಗಳಿಗೆ ನಮನ ಸಲ್ಲಿಸಿದ ರಿಷಬ್ ಶೆಟ್ಟಿ

ಶನಿವಾರ, 19 ನವೆಂಬರ್ 2022 (08:40 IST)
ಬೆಂಗಳೂರು: ಕಾಂತಾರ ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿರುವುದು ರಿಷಬ್ ಶೆಟ್ಟಿ ಸಂತೋಷಕ್ಕೆ ಕಾರಣವಾಗಿದೆ.

ಕೇವಲ 18 ಕೋಟಿ ರೂ.ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಇಂದು 400 ಕೋಟಿ ಗಡಿಗೆ ಬಂದು ತಲುಪಿದೆ. ಜೊತೆಗೆ ಕೇವಲ ಕನ್ನಡದಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಪರಭಾಷೆಗಳಿಂದಲೂ ಬೇಡಿಕೆ ಬಂದಿದ್ದರಿಂದ ಬಹುಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

ಈ ಯಶಸ್ಸಿನ ಬಳಿಕ ರಿಷಬ್ ಈಗ ದೈವಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ಮತ್ತು ಗುಳಿಗ ದೈವದ ಕತೆಯಿದೆ. ಇದೀಗ ಚಿತ್ರದ ಯಶಸ್ಸಿಗೆ ಈ ಎರಡು ದೈವಗಳ ಆಶೀರ್ವಾದ ಕಾರಣ. ಅವರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಆಶಿಸುವುದಾಗಿ ರಿಷಬ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ