ಕಾಮಿಡಿ ಶೋ ಕಿಲಾಡಿಗಳಿಂದ ಹೊರಬಂದ ಯೋಗರಾಜ್ ಭಟ್: ಹೊಸ ಜಡ್ಜ್ ಎಂಟ್ರಿ

ಗುರುವಾರ, 17 ನವೆಂಬರ್ 2022 (09:40 IST)
ಬೆಂಗಳೂರು: ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರು ಜೊತೆಗೆ ವೈಮನಸ್ಯದ ಬಳಿಕ ನಿರ್ದೇಶಕ ಯೋಗರಾಜ್ ಭಟ್ ಕಾಮಿಡಿ ಕಿಲಾಡಿಗಳು ಶೋನಿಂದ ಹೊರಬಂದಿದ್ದಾರೆ.

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ತೀರ್ಪುಗಾರರಾಗಿದ್ದ ಯೋಗರಾಜ್ ಭಟ್ ಈ ವಾರದ ಶೋನಲ್ಲಿ ಕಾಣಿಸಿಕೊಂಡಿಲ್ಲ. ಅವರ ಬದಲು ನೆನಪಿರಲಿ ಪ್ರೇಮ್ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

ತಮ್ಮ ನಿರ್ದೇಶನದ ಪದವಿ ಪೂರ್ವ ಸಿನಿಮಾ ಟಿವಿ ರೈಟ್ಸ್ ಖರೀದಿ ವಿಚಾರದಲ್ಲಿ ರಾಘವೇಂದ್ರ ಹುಣಸೂರು ಮೊದಲು ಒಪ್ಪಿ ಬಳಿಕ ಫೋನ್ ಕರೆ ಸ್ವೀಕರಸಿದೇ ಅಸಡ್ಡೆ ಮಾಡಿದ್ದು ಯೋಗರಾಜ್ ಭಟ್ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಭಟ್ರು ರಾಘವೇಂದ್ರ ಹುಣಸೂರುಗೆ ಬಾಯಿಗೆ ಬಂದಂತೆ ಬೈದ ಅಡಿಯೋ ಒಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಯೋಗರಾಜ್ ಭಟ್ ಶೋನಿಂದಲೂ ಹೊರಬಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ