ಮೋಹನ್ ಲಾಲ್ ಜೊತೆ ಅಭಿನಯಿಸುವ ಆಫರ್ ತಿರಸ್ಕರಿಸಿದ ರಿಷಬ್ ಶೆಟ್ಟಿ?

ಮಂಗಳವಾರ, 31 ಜನವರಿ 2023 (09:00 IST)
ಬೆಂಗಳೂರು: ಕಾಂತಾರ ಸಿನಿಮಾ ಬಳಿಕ ರಿಷಬ್ ಶೆಟ್ಟಿಗೆ ಪರಭಾಷೆಗಳಿಂದಲೂ ಆಫರ್ ಬರುತ್ತಿದೆ. ಈ ನಡುವೆ ರಿಷಬ್ ಗೆ ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಜೊತೆ ನಟಿಸುವ ಆಫರ್ ಬಂದಿದೆಯಂತೆ.

ಮೋಹನ್ ಲಾಲ್ ನಾಯಕರಾಗಿರುವ ಮಲೈಕೋಟ್ಟೈ ವಾಲಿಬನ್ ಎಂಬ ಸಿನಿಮಾದಲ್ಲಿ ನಟಿಸಲು ರಿಷಬ್ ಗೆ ಅವಕಾಶ ಸಿಕ್ಕಿತ್ತು. ಆದರೆ ರಿಷಬ್ ಈ ಮೊದಲೇ ತಮಗೆ ಕನ್ನಡವೇ ಮೊದಲ ಆದ್ಯತೆ ಎಂದಿದ್ದರು.

ಅಂದು ಹೇಳಿದ ಮಾತಿನಂತೇ ರಿಷಬ್ ಇಂದಿಗೂ ನಡೆದುಕೊಂಡಿದ್ದಾರೆ. ಇಂತಹ ದೊಡ್ಡ ಆಫರ್ ಸಿಕ್ಕರೂ ತನಗೆ ಕನ್ನಡವೇ ಮೊದಲು ಎಂದು ರಿಷಬ್ ಆಫರ್ ತಿರಸ್ಕರಿಸಿದ್ದಾರೆ ಎಂಬ ಸುದ್ದಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ