ಹೊಸ ಉದ್ಯಮಕ್ಕೆ ಕಾಲಿಟ್ಟ ರಿಷಬ್ ಶೆಟ್ಟಿ

ಗುರುವಾರ, 25 ಮೇ 2023 (16:46 IST)
Photo Courtesy: Twitter
ಬೆಂಗಳೂರು: ಇಷ್ಟು ದಿನ ನಿರ್ದೇಶಕರಾಗಿ, ನಟರಾಗಿ, ನಿರ್ಮಾಪಕರಾಗಿ ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದ ರಿಷಬ್ ಶೆಟ್ಟಿ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ರಿಷಬ್ ಈಗ ತಮ್ಮ ತವರು ಕೆರಾಡಿ ಹೆಸರಿನಲ್ಲೇ ಸ್ಟುಡಿಯೋ ಒಂದನ್ನು ಆರಂಭಿಸಿದ್ದು, ಈ ಸ್ಟುಡಿಯೋ ಸಿನಿಮಾ ಪ್ರಚಾರ, ಮಾರ್ಕೆಟಿಂಗ್ ಕೆಲಸಗಳನ್ನು ಮಾಡಿಕೊಡಲಿದೆ.

‘ಒಂದು ಸಿನಿಮಾದ ಗೆಲುವಿಗೆ ನಿರ್ಮಾಣದಷ್ಟೇ ಪ್ರಚಾರವೂ ಅಗತ್ಯವಿದೆ. ಸಿನಿಮಾಗಳನ್ನು ಮಾಡಿ ಅದನ್ನು ಜನರಿಗೆ ತಲುಪಿಸಿದ ಅನುಭವದೊಂದಿಗೆ ನಮ್ಮ ತಂಡ ಒಂದು ಹೊಸ ಹೆಜ್ಜೆ ಇರಿಸಿದೆ. ‘ಕೆರಾಡಿ ಸ್ಟುಡಿಯೋಸ್’ ಎಂಬ ವೇದಿಕೆ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಆರಂಭಿಸಿದ್ದೇವೆ. ಇದು ಉತ್ತಮ ಚಿತ್ರಗಳು ಮತ್ತು ಜನರ ನಡುವಿನ ಸಂಪರ್ಕ ಸೇತುವೆ ಆಗಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಕೆರಾಡಿ ನಾನು ಹುಟ್ಟಿ ಬೆಳೆದ ಊರು. ಎಲ್ಲಕ್ಕಿಂತ ನನ್ನೊಳಗಿನ ಸಿನಿಮಾ ಕನಸು ಹುಟ್ಟಿದ ಊರು. ಈ ಪ್ರಯತ್ನವನ್ನು ಕೆರಾಡಿಗೆ ಅರ್ಪಿಸಿ ಚಿತ್ರರಂಗಕ್ಕೆ ನಮ್ಮ ಅಳಿಲು ಸೇವೆಯನ್ನು ಮುಂದುವರಿಸಲಿದ್ದೇವೆ. ನಿಮ್ಮ ಆಶೀರ್ವಾದವಿರಲಿ’ ಎಂದು ರಿಷಬ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ